ಇನ್‌ಸ್ಟಾಗ್ರಾಮ್ ಸ್ನೇಹಿತನಿಂದ ಅತ್ಯಾಚಾರ: ತಾಯಿಗೆ ವೀಡಿಯೋ ಕಳುಹಿಸಿದ ಪಾಪಿ

Rape by Instagram friend: Sinner who sent video to mother

ಇನ್‌ಸ್ಟಾಗ್ರಾಮ್ ಸ್ನೇಹಿತ

ಗುರುಗ್ರಾಮ: ಉತ್ತರ ಪ್ರದೇಶ ಮೂಲದ ಯುವಕನೋರ್ವ ಇನ್‌ಸ್ಟಾಗ್ರಾಮ್ ಮೂಲಕ ಸ್ನೇಹಿತನಾಗಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ತಾಯಿಗೇ ವೀಡಿಯೋ ಕಳುಹಿಸಿದ ಪ್ರಕರಣ ಗುರುಗ್ರಾಮದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ದ್ವಿವೇದಿ ಎಂಬಾತನ ವಿರುದ್ಧ ಲೈಂಗಿಕ ದೌರ್ಜನ್ಯ, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಕಳೆದ ವರ್ಷ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಮಗಳ ಜೊತೆ ಸ್ನೇಹ ಬೆಳೆಸಿ, ನನ್ನ ಮಗಳನ್ನು ಗುರುಗ್ರಾಮದ ಹೋಟೆಲ್‌ಗೆ ಕರೆದಿದ್ದ ವ್ಯಕ್ತಿಯು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬೆತ್ತಲೆ ವಿಡಿಯೊ ಕಾಲ್‌ಗಳನ್ನು ಸಹ ಮಾಡಿದ್ದಾನೆ ಎಂದು ಬಾಲಕಿಯ ತಾಯಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಮಗಳ ಅಶ್ಲೀಲ ಚಿತ್ರವನ್ನು ಪೋಸ್ಟ್ ಮಾಡಿರುವ ಆತ, ನನಗೂ ಕಳುಹಿಸಿದ್ದಾನೆ. ಈ ಬಗ್ಗೆ ಮಗಳನ್ನು ವಿಚಾರಿಸಿದಾಗ ಸಂಪೂರ್ಣ ವಿಚಾರ ತಿಳಿಸಿದ್ದಾಳೆ ಎಂದು ತಾಯಿ ಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!