ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

IMG-20211124-WA0019

ದಾವಣಗೆದಾವಣಗೆರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 8 ಲಕ್ಷ ಮೌಲ್ಯದ ಒಟ್ಟು ಸುಮಾರು 200 ಗ್ರಾಂ ತೂಕದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಹಾಗೂ 2 ಸಾವಿರ ರೂ., ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಹೆದ್ದಾರಿಗಳಲ್ಲಿ ಸುಲಿಗೆ, ಮನೆ ದರೋಡೆ ಸೇರಿದಂತೆ ಈ ಆರೋಪಿಗಳು ಒಟ್ಟು ಏಳು ಪ್ರಕರಣದಲ್ಲಿ ಭಾಗಿಯಾಗಿದ್ದರು. ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೆದ್ದಾರಿಗಳಲ್ಲಿ ದರೋಡೆ ಆಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಾವಣಗೆರೆ ಕೆಟಿಜೆ ನಗರ ಠಾಣೆಯಲ್ಲಿ 01 ಪ್ರಕರಣ, ಮತ್ತು ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ 3 ಪ್ರಕರಣಗಳು, ಮನೆ ಕಳ್ಳತನ ಸೇರಿ ಒಟ್ಟು 07 ಪ್ರಕರಣಗಳಲ್ಲಿ ಆರೋಪಿತರು ಭಾಗಿಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.

ಪ್ರಕರಣಗಳ ಪತ್ತೆಗಾಗಿ ದಾವಣಗೆರೆ‌ ಗ್ರಾಮಾಂತರ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಕನಿಕಾ ಸಿಕ್ರಿವಾಲ್ ಅವರ ಮಾರ್ಗದರ್ಶನದಲ್ಲಿ ಪಿಐ ಲಿಂಗನಗೌಡ ನೆಗಳೂರು ನೇತೃತ್ವದ ತಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ದಸ್ತಗಿರಿ‌ ಮಾಡಿದ್ದಾರೆ. ಪಿಎಸ್‌ಐ ಗಳಾದ ಪುಷ್ಪಲತಾ,ಲಕ್ಷ್ಮಣ ಹೆಚ್.ಕೆ, ಅಶ್ವಿನ್ ಕುಮಾರ ಹಾಗೂ ಸಿಬ್ಬಂದಿಗಳಾದ ಜೋವಿತ್ ರಾಜ್, ಎಎಸ್ಐ ಮತ್ತು ದೇವೆಂದ್ರನಾಯ್ಕ, ನಾಗರಾಜಯ್ಯ, ಅಣ್ಣಯ್ಯ, ನಾಗೇಶ್ ನಾಯ್ಕ, ರಾಜಶೇಖರ್, ರಾಘವೇಂದ್ರ, ಶಾಂತಕುಮಾರ, ನೂರುಲ್ಲಾ ಶರೀಫ್ ಅವರುಗಳು ಆರೋಪಿತರ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!