ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲ್ಯಕ್ಕೆ ಹೆಚ್ಚು ಒತ್ತು – ಫ್ರೋ. ಅನಿತಾ

IMG-20211120-WA0009

 

ದಾವಣಗೆರೆ: ರಾಜ್ಯದ ಪದವಿ ಕಾಲೇಜುಗಳಲ್ಲಿ ನೂತನವಾಗಿ ಜಾರಿಗೆ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020 ಹೆಚ್ಚು ಕೌಶಲ್ಯಗಳಿಂದ ಕೂಡಿದ್ದು ಕೌಶಲಾಧಾರಿತ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ ಅನಿತಾ ಎಚ್ ಎಸ್ ರವರು ಅಭಿಪ್ರಾಯಪಟ್ಟರು .

ಅವರು ಇಂದು ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರ ವೇದಿಕೆ ವತಿಯಿಂದ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರಿ ಗೋಸ್ಕರ ಆಯೋಜಿಸಿದ್ದ
ಆನ್ ಲೈನ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು
ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಮುಕ್ತ ಆಯ್ಕೆಗೆ ಅವಕಾಶವನ್ನು ಕಲ್ಪಿಸಿದೆ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಅಥವಾ ಇಚ್ಛೆ ಪಡುವ ಯಾವುದೇ ವಿಷಯವನ್ನು ಕಲಿಯಲು
ಹೋಸ ಶಿಕ್ಷಣ ನೀತಿಯಲ್ಲಿ ಅವಕಾಶವಿದೆ ಈ ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಈ ರೀತಿ ಅವಕಾಶ ನೀಡಿರಲಿಲ್ಲ ಒಬ್ಬ ವಿದ್ಯಾರ್ಥಿ ತಾನು ಬಯಸಿದರೆ ಯಾವುದೇ ವಿಷಯವನ್ನು ಎಲ್ಲಿಯಾದರೂ ಕಲಿಯಬಹುದು ಎಂಬುದನ್ನು ಒತ್ತಿ ಒತ್ತಿ ಶಿಕ್ಷಣ ನೀತಿ ಹೇಳುತ್ತದೆ. ಇದರಿಂದ ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಕೌಶಲ್ಯಗಳನ್ನು ಕಲಿಕೆ ಮೂಲಕ ವೃದ್ಧಿಸಿಕೊಂಡು ಮುಂದಿನ ದಿನಗಳಲ್ಲಿ ಒಳ್ಳೆ ಕಡೆಗೆ ಉದ್ಯೋಗ ಪಡೆದು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರು ರಾಷ್ಟ್ರೀಯ ಶಿಕ್ಷಣ ನೀತಿ ಯಿಂದ ಆಗಿರುವ ಬದಲಾವಣೆಗೆ ಒಗ್ಗಿಕೊಂಡು ವಿದ್ಯಾರ್ಥಿಗಳ ಕಲಿಕೆಯಲ್ಲಿ ಮುಂದಾಗಬೇಕು ಹಾಗೂ ಮುಂದಿನ ದಿನಗಳಲ್ಲಿ ಮತ್ತಷ್ಟು ಬದಲಾವಣೆ ಆಗಬಹುದು. ಬದಲಾವಣೆಗಳಿಗೆ ನಾವು ಶಿಕ್ಷಕರು ಹೊಂದಿಕೊಳ್ಳಬೆಕು
ಎಂದು ಹೇಳಿದರು.

ಮುಂದುವರೆದು ಮಾತನಾಡುತ್ತಾ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಷಯದಲ್ಲಿ ಮುಕ್ತ ಆಯ್ಕೆ ವಿಷಯಗಳ ಬಗ್ಗೆ ಇದ್ದ ಗೊಂದಲಗಳನ್ನು ಪರಿಹರಿಸಿದರು. ಅಧ್ಯಾಪಕರಲ್ಲಿ ಉಂಟಾಗಿರುವ ಮುಕ್ತ ಆಯ್ಕೆಯ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಉನ್ನತ ಶಿಕ್ಷಣ ಪರಿಷತ್ ನ ವಿಶೇಷಾಧಿಕಾರಿಯಾದ ಪ್ರೊ ಜಯಪ್ಪ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಗುತ್ತಿರುವ ಬದಲಾವಣೆಗಳು ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಪೂರಕವಾಗಲಿವೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಯಲ್ಲಿರುವ ಗುಣಾತ್ಮಕ ಅಂಶಗಳನ್ನು ನಾವೆಲ್ಲ ಒಪ್ಪಿಕೊಂಡು ಶಿಕ್ಷಣ ಪದ್ಧತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿವುದರ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು. ಆರಂಭದಲ್ಲಿ ಯಾವುದೇ ಹೊಸ ಪದ್ಧತಿಯನ್ನು ಅನುಷ್ಠಾನಗೊಳಿಸಿದಾಗ ಸಾಧಕ ಬಾಧಕಗಳು ಹೆಚ್ಚು ಒಂದೊಂದಾಗಿ ನಾವು ಸಮಸ್ಯೆಗಳನ್ನು ಪರಿಹರಿಸುತ್ತಾ ಹೋದಾಗ ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ನೀತಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯಪಟ್ಟರು.

ವೇದಿಕೆ ಕಾರ್ಯದರ್ಶಿಯಾದ ವೆಂಕಟೇಶ್ ಬಾಬು ರವರು ಪ್ರಾಸ್ತಾವಿಕವಾ ಮಾತನಾಡುತ್ತ ಹೊಸ ಶಿಕ್ಷಣ ನೀತಿ ಜಾರಿಗೆ ಬಂದ ಮೇಲೆ ವಿವಿಧ ಕಾಲೇಜಿನ ಪ್ರಿನ್ಸಿಪಾಲರಲ್ಲಿ ಅಧ್ಯಾಪಕರಲ್ಲಿ ತುಂಬಾ ಗೊಂದಲಗಳಿದ್ದವು
ಅದನ್ನು ಪರಿಹರಿಸಲೆಂದೇ ಈ ತರಹದ ಕಾರ್ಯಕ್ರಮವನ್ನು ಆಯೋಜಿಸಿ ಅಧ್ಯಾಪಕರ ಗೊಂದಲಗಳನ್ನು ಬಗೆ ಹರಿಸುವಲ್ಲಿ ವೇದಿಕೆಯು ಪ್ರಯತ್ನ ಪಡುತ್ತಿದೆ. ವೇದಿಕೆಯ ಮೂಲಕ ಇನ್ನು ಮುಂದೆ ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸುವ ಆಲೋಚನೆ ಇದ್ದು ಆದಷ್ಟು ಶಿಕ್ಷಣ ನೀತಿಯನ್ನು ಸಮರ್ಪಕ ವಾಗಿ ಹಾಗೂ ಗೊಂದಲಗಳಿಲ್ಲದೆ ಜಾರಿಗೆ ತರುವುದನ್ನು ವೇದಿಕೆ ಸ್ವಾಗತಿಸುತ್ತದೆ ಈ ನಿಟ್ಟಿನಲ್ಲಿ ಯಾವುದೇ ಸಮಸ್ಯೆಗಳಿದ್ದರೂ ವೇದಿಕೆಯು ಅದಕ್ಕೆ ಸ್ಪಂದಿಸುತ್ತದೆ ಎಂದು ಹೇಳಿದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೇದಿಕೆ ಅಧ್ಯಕ್ಷರಾದ ಪ್ರೊ ಕರಿಬಸಪ್ಪನವರು ಅಧ್ಯಾಪಕರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪನ್ಮೂಲ ವ್ಯಕ್ತಿಗಳು ಉನ್ನತ ಪರಿಷತ್ ನ ವಿಶೇಷ ಅಧಿಕಾರಿಗಳು ಪ್ರಯತ್ನಿಸಿರುತ್ತಾರೆ ಹೀಗೆ ಮುಂದೆ ಕೂಡ ಇ ತರಹದ ಕಾರ್ಯಕ್ರಮ ಆಯೋಜಿಸುವಲ್ಲಿ ವೇದಿಕೆಯು ಸದಾ ಚಟುವಟಿಕೆಯಿಂದ ಇರುತ್ತದೆ ಹಾಗೂ ಎಲ್ಲರ ಪಾಲ್ಗೊಳ್ಳುವಿಕೆಯನ್ನು ಬಯಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಗೌರವಾಧ್ಯಕ್ಷ ಡಾ. ರವಿ ಎಸ್ಪಿ ನಿವೃತ್ತ ಪ್ರಾಂಶುಪಾಲ ಪ್ರೊ ರಾಮರಾವ್ ಹಾಗೂ ವೇದಿಕೆ ಎಲ್ಲಾ ಪದಾಧಿಕಾರಿಗಳು ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಕಾಲೇಜುಗಳಿಂದ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಎಲ್ಲ ಬೋಧಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವೇದಿಕೆಯ ಸಹ ಕಾರ್ಯದರ್ಶಿಯಾದ
ಡಾ. ಮಂಜುನಾಥ್ ರವರು ಯಶಸ್ವಿಯಾಗಿ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

error: Content is protected !!