ರಾಜಕೀಯದಲ್ಲಿಯೂ ದಾವಣಗೆರೆಯ ಕ್ಷೇಮದ ಗುರಿ ನನ್ನದು: ಡಾ.ರವಿಕುಮಾರ್
ಹರಪನಹಳ್ಳಿ: ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವ ನನಗೆ ರಾಜಕೀಯ ಕ್ಷೇತ್ರಕ್ಕೆ ಬಂದು ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೂ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾದ್ಯಂತ ಒತ್ತಾಯ ಕೇಳಿಬಂದಿದೆ. ಭವಿಷ್ಯದ ನಿರ್ಧಾರವು ಏನೇ ಆಗಿದ್ದರೂ ಪ್ರೀತಿ ಆರೈಕೆ ಟ್ರಸ್ಟ್ ಮೂಲಕ ನಾವು ನೀಡುತ್ತಿರುವ ಆರೋಗ್ಯ ದಾಸೋಹ ಸೇವೆ ಚಿರಂತನವಾಗಿ ಮುಂದುವರಿಯಲಿದೆ ಎಂದು ದಾವಣಗೆರೆಯ ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್ ಟಿ.ಜಿ. ಹೇಳಿದರು.
ಹರಪನಹಳ್ಳಿ ತಾಲೂಕಿನ ಕಮ್ಮತಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಚಿಕಿತ್ಸೆ 55ನೇ ಉಚಿತ ಶಿಬಿರದಲ್ಲಿ ಮಾತನಾಡಿ, ವೈದ್ಯಕೀಯ ಸೇವೆಯಲ್ಲಿ ಸಂತೃಪ್ತನಾಗಿದ್ದ ನನ್ನನ್ನು ರಾಜಕೀಯ ಕರೆತರುವ ಹಂಬಲ, ಒತ್ತಾಯವನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಜನರೆಲ್ಲರೂ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನಾನು ದಾವಣಗೆರೆ ಲೋಕಸಭೆ ಕ್ಷೇತ್ರಕ್ಕೆ ಸ್ಫರ್ಧಿಸುವ ಸಂಪೂರ್ಣ ನಿರ್ಧಾರವು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವರಿಷ್ಠರಿಗೆ ಸೇರಿದೆ ಎಂದರು.
ಭಾರತದ ಹೆಮ್ಮೆಯ ಪ್ರಜೆಯಾಗಿ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ, ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡುವ ಏಕೈಕೆ ಉದ್ದೇಶದಿಂದ ನನ್ನ ಕಾರ್ಯವನ್ನು ಮುಂದುವರಿಸಲಿದ್ದೇನೆ. ಪ್ರೀತಿ ಆರೈಕೆ – ಆರೋಗ್ಯ ದಾಸೋಹದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಮೂಲಕ ಭಾರತದ ಪ್ರಗತಿಗೆ ನನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಆರೋಗ್ಯವನ್ನು ಕಾಪಾಡಿಕೊಳ್ಳುವ ಹೊಣೆ ಮತ್ತು ಸವಾಲು ಇಂದು ಎಲ್ಲ ವಯೋಮಾನ ದವರಿಗೂ ಕಾಡುತ್ತಿದ್ದು, ಇದಕ್ಕೆ ಬದಲಾದ ವಾತಾವರಣ, ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರದ ಪಾತ್ರವೂ ಇದೆ. ಯಾವುದೇ ರೀತಿಯ ದೇಹದ ಅಸಹಜತೆಯನ್ನು ನಿರ್ಲಕ್ಷ್ಯ ಮಾಡದೆಯೇ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಾ. ರವಿಕುಮಾರ್ ಸಲಹೆ ನೀಡಿದರು.
ಆರೋಗ್ಯ ಶಿಬಿರದಲ್ಲಿ ಕಮ್ಮತಹಳ್ಳಿಯ ಮುಖಂಡರಾದ ಜಯಣ್ಣ, ಎನ್. ಸಿದ್ದಪ್ಪ, ಕೆ.ಯು. ಮುರುಗೇಶ್, ಕೆ.ಎಸ್. ತಿಪ್ಪೇಶ್, ಮರುಳ ಸಿದ್ದೇಶ್, ಕೆ.ಎಲ್. ಪಂಪಾಪತಿ, ಸುರೇಶ್ ಸೇರಿದಂತೆ ಸರ್ವ ಸಹಕಾರ ನೀಡಿ ಭಾಗವಹಿಸಿದ್ದರು.
ಆರೈಕೆ ಆಸ್ಪತ್ರೆಯ ವೈದ್ಯಕೀಯ ತಂಡದಿಂದ ಡಾ. ಆನಂದ್, ಡಾ. ಹನುಮಂತಯ್ಯ, ಡಾ.ಸಂದೀಪ್, ಡಾ. ಕೀರ್ತಿ ಚಿಕಿತ್ಸೆ ಮತ್ತು ಸಲಹೆ ನೀಡಿದರು.
ಉದ್ಯಮಿಗಳಾದ ನುಂಕೇಶ್, ಟ್ರಸ್ಟ್ ಸಿಬ್ಬಂದಿಗಳಾದ ವಿನೋದ್ ಕುಮಾರ್, ಶರತ್, ಸುದೀಪ್, ಕಿರಣ್ ಆಲೂರ್, ಯುವ ನಾಯಕರಾದ ಹರೀಶ್. ಡಿ.ಎಸ್, ನಿಖಿಲ್ ಭಾಗವಹಿಸಿದ್ದರು.
**
ಬಾಕ್ಸ್ ಐಟಂ
ಅಭಿಮಾನದ ಆಗ್ರಹ
ಡಾ. ರವಿಕುಮಾರ್ ಟಿ.ಜಿ. ಅವರು ಶಿಬಿರದ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಸಾರ್ವಜನಿಕರು ಮತ್ತು ಅಭಿಮಾನಿಗಳ ಗುಂಪು ಸುತ್ತುವರಿದರು. ಈ ಬಾರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧೆ ಮಾಡಬೇಕು ಎಂದು ಅಭಿಮಾನದ ಒತ್ತಾಯ ಮಾಡಿದರು. ಆರೋಗ್ಯ ಶಿಬಿರಗಳ ಮೂಲಕ ಸಾರ್ಥಕ ಸೇವೆ ಮಾಡಿದ್ದು, ದಾವಣಗೆರೆಯ ಅಭಿವೃದ್ಧಿಗೆ ಪ್ರಜ್ಞಾವಂತರು, ವಿದ್ಯಾವಂತರು ಕೊಡುಗೆ ಬೇಕಿದ್ದು, ಪಕ್ಷವು ನಿಮಗೇ ಅಭ್ಯರ್ಥಿ ಮಾಡಲಿ ಎಂದು ನಾವೂ ಮನವಿ ಮಾಡುತ್ತೇವೆ ಎಂದು ಅಭಿಮಾನ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು