ರಿಯಲ್ ಎಸ್ಟೇಟ್ ಉದ್ಯಮಿ ಪರಮೇಶಿ ಹತ್ಯೆಯ 4 ಜನ ಆರೋಪಿಗಳ ಬಂಧನ
ದಾವಣಗೆರೆ: ಹಳೇಯ ವೈಷಮ್ಯ ಕಾರಣಕ್ಕಾಗಿ ಕಾಂಗ್ರೆಸ್ ಮುಖಂಡ ಹಾಗೂ ನಗರದ ಪ್ರಖ್ಯಾತ ಉದ್ಯಮಿಯೊರ್ವರ ಸಬ್ಬಂದಿಯನ್ನ ಮೂವರು ದುಷ್ಕರ್ಮಿಗಳು ಬರ್ಬರವಾಗಿ ಬುಧವಾರ ನಗರದ ಬಸವರಾಜಪೇಟೆಯಲ್ಲಿ ಬೀಕರವಾಗಿ ಹತ್ಯೆ ಮಾಡಲಾಗಿತ್ತು.
ಸೀಮೆಎಣ್ಣೆ ಪರಮೇಶ್ (42) ನಿನ್ನೆ ರಾತ್ರಿ ಕೊಲೆಯಾಗಿದ್ದ. ನಿನ್ನೆ ಸಂಜೆ ಪರಿಚಯಸ್ಥರ ಮನೆಗೆ ಹೋಗಿ ಅಲ್ಲಿಂದ ವಾಪಸ್ ಬರುವ ವೇಳೆ ಆಟೋರಿಕ್ಷಾದಲ್ಲಿ ಬಂದ ಮೂವರು ದುಷ್ಕರ್ಮಿಗಳು ಪರಮೇಶ್ ಮೇಲೆ ಏಕಾಏಕಿ ದಾಳಿ ನಡೆಸಿ ಕೆಳಗಡೆ ಬಿದ್ದಾಗ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದರು. ದಾವಣಗೆರೆ ಪೊಲೀಸರು ತನಿಖೆ ನಡೆಸಿ ಇಂದು ದಾವಣಗೆರೆ ನಗರದ ಬಸವನಗರ ಪೊಲೀಸ್ ಠಾಣೆಯವರಿಂದ ತನಿಖೆನಡೆಸಲಾಗುತ್ತಿದೆ.
ಕೊಲೆ ಪ್ರಕರಣದ ಆರೋಪಿತರ ವಿವರ:-
01)ಹನುಮಂತ 33 ವರ್ಷ, 02) ಬಸವರಾಜ, 31 ವರ್ಷ, 03) ಕುಮಾರ, 27 ವರ್ಷ, 04) ನಯಾಜ್ 23 ವರ್ಷ ಇವರೆಲ್ಲರೂ ದಾವಣಗೆರೆ ನಿವಾಸಿಗಳಾಗಿರುತ್ತಾರೆ.
ದಾವಣಗೆರೆ ಎಸ್ ಪಿ ಸಿಬಿ ರಿಷ್ಯಂತ್ ನಿನ್ನೆ ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಸವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ