ಹುಲಿಕಟ್ಟೆ ಗ್ರಾ.ಪಂಗೆ ಅಧ್ಯಕ್ಷರಾಗಿ ರೇಖಾ ಬಸವರಾಜ್ ಅವಿರೋಧ ಆಯ್ಕೆ

ದಾವಣಗೆರೆ: ತಾಲ್ಲೂಕಿನ ಹುಲಿಕಟ್ಟೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ರೇಖಾ ಬಸವರಾಜ್ ಕೆರೆಯಾಗಳಹಳ್ಳಿ ಮತ್ತು ಉಪಾಧ್ಯಕ್ಷರಾಗಿ ಜಯ್ಯಮ್ಮ ಹನುಮಪ್ಪ ಕೆರೆಯಾಗಳಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿ ಎನ್.ಎಸ್. ಲೋಹಿತ್ ಕುಮಾರ್ ತಿಳಿಸಿದ್ದಾರೆ. ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಗ್ರಾಪ ಸದಸ್ಯರಾದ ಹಳ್ಳಿ ಬಸವರಾಜಪ್ಪ, ಬಿ.ಯು. ರವೀಂದ್ರ, ಶೃತಿ ಸಿದ್ದೇಶಿ, ಆಶಾ ಅರುಣಾನಾಯ್ಕ್, ಅಧಿಕಾರಿಗಳಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದಾವಣಗೆರೆ ಉಪ ವಿಭಾಗದ ಎಇಇ ವಿ. ರವಿಂದ್ರನಾಯ್ಕ್, ಎನ್.ಎಸ್. ಲೋಹಿತ್ ಕುಮಾರ್ ಹಾಜರಿದ್ದರು.