ರಾಜ್ಯದ ತಾಲೂಕು ಪಂಚಾಯ್ತಿಗಳಿಗೆ ಅನಿರ್ಬಂಧಿತ ಅನುದಾನ ಬಿಡುಗಡೆ

ದಾವಣಗೆರೆ: ರಾಜ್ಯದ ಎಲ್ಲಾ ತಾಲ್ಲೂಕು ಪಂಚಾಯ್ತಿಗಳಿಗೆ ರಾಜ್ಯ ಹಣಕಾಸು ಆಯೋಗದಿಂದ ತಾಲೂಕ್ ಪಂಚಾಯತ್ ಅನಿರ್ಬಂಧಿತ ಅನುದಾನದ ಮೊದಲನೇ ಕಂತನ್ನು ಬಿಡುಗಡೆಗೊಳಿಸಿ ಆದೇಶಿಸಿದೆ.,

2022-23ನೇ ಸಾಲಿನ ಆಯವ್ಯಯದಲ್ಲಿ ರೂ. 51638.41 ಲಕ್ಷಗಳನ್ನು ತಾಲೂಕು ಪಂಚಾಯ್ತಿಗಳ ಅನಿರ್ಬಂಧಿತ ಅನುದಾನದಡಿಯಲ್ಲಿ ಒದಗಿಸಲಾಗಿದ್ದು, ಇದರಲ್ಲಿ ಮೊದಲನೇ ಕಂತಿಗೆ ನೂರ ಇಪ್ಪತ್ತೊಂಬತ್ತು ಕೋಟಿ ಒಂಬತ್ತು ಲಕ್ಷದ ಅರವತ್ತು ಸಾವಿರದ ಎರಡು ನೂರ ಐವತ್ತು ರೂಪಾಯಿಗಳನ್ನು ರಾಜ್ಯದ ಎಲ್ಲಾ 233 ತಾಲೂಕು ಪಂಚಾಯ್ತಿಗಳಿಗೆ ಬಿಡುಗಡೆಗೊಳಿಸಿ ಮೇ.13ರಂದೇ ಆದೇಶಿಸಿದೆ.

ಅದರಂತೆ ದಾವಣಗೆರೆ ಜಿಲ್ಲೆಯ ಚನ್ನಗಿರಿ, ದಾವಣಗೆರೆ, ಹರಿಹರ, ಹೊನ್ನಾಳಿ, ಜಗಳೂರು, ನ್ಯಾಮತಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ತಾಲೂಕು ಪಂಚಾಯ್ತಿ ಒಂದಕ್ಕೆ 5540602 ಲಕ್ಷ ರೂನಂತೆ ಪ್ರತಿ ತಾಲೂಕು ಪಂಚಾಯ್ತಿಗೆ ಅನುದಾನ ಬಿಡುಗಡೆಯಾಗಿದೆ.

garudavoice21@gmail.com 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!