ಯುಗಾದಿ ಹಬ್ಬಕ್ಕೆ ಉಚ್ಚoಗೆಮ್ಮನ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆ- ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ.

ವಿಜಯನಗರ: ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಧಾರ್ಮಿಕ ಪ್ರಸಿದ್ಧ ಉಚ್ಚoಗಿದುರ್ಗದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಏ.31 ರಿಂದ ಮೇ 04 ರವರೆಗೆ ನಡೆಯುತ್ತದೆ ಏ.31 ರಂದು ಪಾದಗಟ್ಟೆಯ ಹತ್ತಿರ ಓಕಳಿಗುಣಿ ಪೂಜೆ,ಏ.01 ರಂದು ಯುಗಾದಿ ಅಮಾವಾಸ್ಯೆ,ಏ.2 ರಂದು ಧಾರ್ಮಿಕ ದಿನಾಚರಣೆ ಹಾಗೂ ಪಾದಗಟ್ಟೆ ಹತ್ತಿರ ಓಕಳಿ ಉತ್ಸವ , ಏ.3 ರಂದು ಚಂದ್ರದರ್ಶನ, ಆನೆಹೊಂಡದ ಉತ್ಸವ,ಏ.04 ರಂದು ದೇವಿಯ ಮಹಾಪೂಜೆ ಹಾಗೂ ಭಕ್ತಾದಿಗಳಿಂದ ವಿವಿಧ ಸೇವಾಸತ್ಕಾರ ಕಾರ್ಯಕ್ರಮಗಳು ನಡೆಯುತ್ತವೆ ವಿಶೇಷವಾಗಿ ಸರ್ಕಾರ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ ಏ.02 ರಂದು ಶನಿವಾರ ಧಾರ್ಮಿಕ ಆಚರಣೆ ಪ್ರಯುಕ್ತ ದೇವಸ್ಥಾನದಲ್ಲಿ ಹೊಸ ಶುಭ ಕೃತ ನಾಮ ಸಂವತ್ಸರದ ರಾಶಿ ಫಲಗಳ ಮಾಹಿತಿ, ದೇವಸ್ಥಾನಕ್ಕೆ ವಿಶೇಷ ಹೂವಿನ ಅಲಂಕಾರ, ವಿಶೇಷ ಪೂಜೆ,ದೇವಿಯ ಭಜನೆ,ಚೌಟಕಿ ಪದಗಳು,ಬೇವು ಬೆಲ್ಲ ವಿತರಣೆ ಮೂಲಕ ಯುಗಾದಿ ಆಚರಿಸಲಾಗುತ್ತದೆ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!