ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘ ಪುನಃ ನವೀಕರಣ – ಬಿ.ದೊಡ್ಡಬಸಪ್ಪ ರೆಡ್ಡಿ

Renewal of Karnataka State Grama Niladhari Center - B. Doddabasappa Reddy

 

ದಾವಣಗೆರೆ : ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘವನ್ನು ನವೀಕರಣ ಗೊಳಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಿ.ದೊಡ್ಡಬಸಪ್ಪ ರೆಡ್ಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಂಘವನ್ನು ನೋಂದಣಿ ಮಾಡಿಸಿ, ಹಾಗೇಯೇ ಬಿಡಲಾಗಿತ್ತು. ಇದರಿಂದ ಸಂಘದ ಕಾರ್ಯ ಚಟುವಟಿಕೆಗಳು ಹಿನ್ನಡೆ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ನಾವುಗಳು ಸಂಘವನ್ನು ದಾವಣಗೆರೆಯ ಸಹಕಾರ ಸಂಘಗಳ ನಿಬಂಧಕರು ಹಾಗೂ ಸಂಘಗಳ ನೋಂದಣಿ ಅಧಿಕಾರಿಗಳ ಸಮ್ಮುಖದಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 13ರ ಅನ್ವಯ 2007-2008ರಿಂದ 2020-2021ನೇ ಸಾಲಿನವರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.

ಈ ರೀತಿಯಾಗಿ ಮಾಡಿದ್ದರ ಪರಿಣಾಮ ಇಂದಿನಿಂದ ಸಂಘಕ್ಕೆ ಮರು ಜೀವ ನೀಡಲಾಗಿದೆ. 10 ಸಾವಿರ ಜನಸಂಖ್ಯೆವುಳ್ಳ ಸದಸ್ಯರಿಗೆ ಬಹಳಷ್ಟು ಅನುಕೂಲ ಆಗಲಿದೆ. ಇದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಸೆಂಬರ್ ಅಂತ್ಯ ಅಥವಾ ಜನವರಿ ಮೊದಲ ವಾರದಲ್ಲಿ ರಾಜ್ಯ ಸಮಾವೇಶ ಆಯೋಜನೆ ಮಾಡಲಿದ್ದೇವೆ. ಈ ಸಂದರ್ಭದಲ್ಲಿ ಸಂಘವನ್ನು ಆಸ್ತಿತ್ವಕ್ಕೆ ತರಲು ಸಹಕಾರ ನೀಡಿದ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಅಭಿನಂದಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ನಾಗೇಶ್, ಖಜಾಂಚಿ ಎ.ಎನ್. ಲೋಹಿತ್, ಗೌರಾವಾಧ್ಯಕ್ಷ ವಿ. ಪಾಂಡುರಂಗಪ್ಪ, ಶಿವಮೊಗ್ಗ ಜಿಲ್ಲಾಧ್ಯಕ್ಷ ಗಿರೀಶ ಕೊಡೂರು, ಮುಖಂಡರಾದ ಆರ್. ಉಲ್ಲಾಸ್, ಮಾಲತೇಶ್ ಮುದ್ದಜ್ಜಿ, ಎ.ಸಿ. ರುದ್ರೇಶ್, ಕೆ. ರಾಜು, ಎ. ಅಂಜಿನಪ್ಪ, ಓ. ಭೋರಯ್ಯ, ಜಿ.ಎಸ್. ಹರೀಶ್ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!