ಯೋಗಪಟುಗಳನ್ನೇ ಮೀರಿಸುತ್ತಾರೆ ನಮ್ಮ ರೇಣುಕಾಚಾರ್ಯ, ಯೋಗದ ವಿವಿಧ ಬಂಗಿಯ ಅದ್ಭುತ ಚಿತ್ರಗಳು ನಿಮಗಾಗಿ

ಬೆಂಗಳೂರು: ಪ್ರತಿ ದಿನದಂತೆ ಇಂದು ಸಹ ಮುಂಜಾನೆ 05:30ಕ್ಕೆ ಯೋಗಾಸನ, ಪ್ರಾಣಾಯಾಮ, ಧ್ಯಾನ ಹಾಗೂ ಸೂರ್ಯ ನಮಸ್ಕಾರದ 14 ಆಯಾಮಗಳನ್ನು ಮಾಡಿದ್ದಾರೆ ರೇಣುಕಾಚಾರ್ಯ. ತಮ್ಮ ಬೆಂಗಳೂರು ನಿವಾಸದಲ್ಲಿ ಯೋಗಾಸದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಯೋಗಾಸನ, ಪ್ರಾಣಾಯಾಮ, ಧ್ಯಾನದಿಂದ, ನಮ್ಮ ದೇಹ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ, ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಲಿದ್ದು, ಕೋವಿಡ್19 ಸೋಂಕಿನಿಂದ ಆಕ್ಸಿಜನ್ ಕೊರೊತೆ ಉಂಟಾಗುವುದನ್ನು ತಡೆಗಟ್ಟಬಹುದಾಗಿದೆ.
ಇಂದಿನ ಯಾಂತ್ರಿಕ ಜೀವನದಲ್ಲಿ ನಾವುಗಳು ನಮ್ಮ ಆರೋಗ್ಯದ ಕಡೆ ಹೆಚ್ಚು ಕಾಳಜಿವಹಿಸ ಬೇಕಾಗಿದೆ. ಇಂದಿನ ಆಹಾರ ಪದ್ಧತಿ ಬದಲಾಗಿದ್ದು ನಾವು ಬೆಳೆಯುವ ಬೆಳೆಗಳಲ್ಲಿ ಹೆಚ್ಚು ರಾಸಾಯನಿಕಗಳನ್ನು ಬಳಸುತ್ತಿದ್ದು ಇದು ನಮ್ಮ ಆರೋಗ್ಯದ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತಿದ್ದು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
ನಮ್ಮ ಆರೋಗ್ಯಕ್ಕೆ ಸರ್ಕಾರಗಳನ್ನು ಹೊಣೆಮಾಡುವ ಬದಲು ನಮ್ಮ ಆರೋಗ್ಯದ ರಕ್ಷಣೆ ನಮ್ಮ ಕೈಯಲ್ಲಿದ್ದು ಸರ್ಕಾರದ ಮಾರ್ಗಸೂಚಿಯಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೆ ಕೋವಿಡ್ ಸೋಂಕನ್ನು ನಿಯಂತ್ರಿಸಬಹುದಾಗಿದೆ.
ಎಂ ಪಿ ರೇಣುಕಾಚಾರ್ಯ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
ಹೊನ್ನಾಳಿ ತಾಲ್ಲೂಕಿನ ಶಾಸಕರು.