ರೇಣುಕಾಚಾರ್ಯ ಕುಟುಂಬದ 62 ಜನರ ಜೊತೆ ಅನೇಕರು ನೇತ್ರದಾನಕ್ಕೆ ಮುಂದಾದ ಯುವಕರು

ದಾವಣಗೆರೆ: ಶಾಸಕ ಎಂ.ಪಿ. ರೇಣುಕಾಚಾರ್ಯ ಅಭಿಮಾನಿ ಬಳಗದಿಂದ ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ಪುನೀತ್ ರಾಜ್ ಕುಮಾರ್ ಗೆ ನುಡಿನಮನ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಕುಟುಂಬದ 62 ಜನರು ಸೇರಿದಂತೆ ಅವಳಿ ತಾಲ್ಲೂಕಿನ ಯುವಜನರು ನೇತ್ರದಾನಕ್ಕೆ ನಿರ್ಧಾರ ಮಾಡಿದರು.
ಹೊನ್ನಾಳಿಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಿನ್ನೆ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಗೀತದ ಮೂಲಕ ನುಡಿ ಗಾಯಕ ರಾಜೇಶ್ ಕೃಷ್ಣನ್ ನಮನ ಸಲ್ಲಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಪ್ರೇರಣೆಯನ್ನಾಗಿ ತೆಗೆದುಕೊಂಡು ರೇಣುಕಾಚಾರ್ಯ ಮತ್ತವರು ಕುಟುಂಬ ವರ್ಗದವರು ನೇತ್ರದಾನಕ್ಕೆ ನಿರ್ಧರಿಸಿದರು.

ಶಾಸಕ ರೇಣುಕಾಚಾರ್ಯ ನೇತ್ರದಾನಕ್ಕೆ ನಿರ್ಧರಿಸುತ್ತಿದ್ದಂತೆ ಅವಳಿ ತಾಲೂಕಿನ ಐನೂರು ಜನರು ಅವರಿಗೆ ಸಾಥ್ ನೀಡಿ, ತಾವು ನೇತ್ರದಾನ ಮಾಡುವುದಾಗಿ ತೀರ್ಮಾನಿಸಿದರು.
ಇದೇ ವೇಳೆ ಮುಂದಿನ ದಿನಗಳಲ್ಲಿ ಅವಳಿ ತಾಲೂಕಿನಲ್ಲಿ ಐದು ಸಾವಿರ ಜನರಿಂದ ನೇತ್ರದಾನ ಮಾಡಿಸಲು ರೇಣುಕಾಚಾರ್ಯ ಸಂಕಲ್ಪ ಮಾಡಿದರು.