ಹೊನ್ನಾಳಿ ಹುಲಿಯಿಂದ ಪ್ರಭಾವಿ ಸಚಿವರ ವಿರುದ್ದ ಗುಡುಗು ಸಿಡಿಲು: ನನ್ನ ತಂಟೆಗೆ ಬಂದರೆ ಸರಿ ಇರಲ್ಲ ಅಂದಿದ್ದು ಯಾರಿಗೆ ಅಂತೀರಾ

GARUDAVOICE EXCLUSIVE:
ದಾವಣಗೆರೆ: ಇತ್ತೀಚೆಗೆ ಸಚಿವ ಈಶ್ವರಪ್ಪ ರೇಣುಕಾಚಾರ್ಯ ವಿರುದ್ದ ಮಾತನಾಡಿದ್ದರು,ಇದಕ್ಕೆ ಹೊನ್ನಾಳಿ ಹುಲಿ ರಿತೀಯಲ್ಲೇ ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ. ನನಗೆ ಹಿರಿಯರ ಬಗ್ಗೆ ಗೌರವವಿದೆ, ನನಗೆ ಬಣ್ಣ ಹಚ್ಚೋದು, ವೇಷ ಹಾಕೋದು ಗೊತ್ತಿಲ್ಲಾ. ನನ್ನ ಬಗ್ಗೆ ಹುಲಿವೇಷ ಎಂದು ಹೇಳಿದವರು ಆತ್ಮವಾಲೋಕನ ಮಾಡಿಕೊಳ್ಳಲಿ ಎಂದರು.
ಯಡಿಯೂರಪ್ಪನವರನ್ನು ರಾಜ್ಯಾದ್ಯಕ್ಷರಾಗಿ ಮಾಡಿದಾಗ ನೀವು ಯಾವ ವೇಷ ಹಾಕಿಕೊಂಡಿದ್ರಿ. ರಾಜ್ಯಪಾಲರಿಗೆ ಪತ್ರ ಬರೆದು ಆಮೇಲೆ ತಿರುಗಿ ಉಲ್ಟಾ ಹೊಡೆದ್ರಿ. ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನನ್ನನ್ನು ಯಡಿಯೂರಪ್ಪನವರ ವಿರುದ್ದ ಎತ್ತಿಕಟ್ಟಲಿಲ್ವಾ. ನೀವು ಚುನಾವಣಾ ಪೂರ್ವದಲ್ಲಿ ಏನು ಮಾಡಿದ್ರೀ ಗೊತ್ತಿಲ್ಲವೇ. ನನ್ನ ಬಗ್ಗೆ ಹಗುರವಾಗಿ ಮಾತನಾಡುವುದು ಬಿಡಬೇಕು ಎಂದಿದ್ದಾರೆ.
ಇನ್ನೂ ಇದೇ ವೇಳೆ ಶಾಸಕ ಅರವಿಂದ್ ಬೆಲ್ಲದ್ ವಿರುದ್ದ ರೇಣುಕಾಚಾರ್ಯ ತಮ್ಮ ಧಾಟಿಯಲ್ಲಿ ಉತ್ತರ ನೀಡಿದ್ರು. ಬೆಲ್ಲದ್ ಅವರೇ ನನ್ನ ಬಳಿ ಇರುವುದು 65 ಜನ ಶಾಸಕರು ಸಿಎಂ ಪರವಾಗಿ ಸಹಿ ಮಾಡಿರೊ ಪತ್ರ. ಯಾರು ಹಳೇ ಪತ್ರ ಎಂದು ಹೇಳಿದ್ದಾರೋ ಅವರಿಗೆ ಪತ್ರ ಬೇಕಾ ಹೇಳಿ ಕಳುಹಿಸಿ ಕೊಡ್ತೀನಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾದ್ಯಕ್ಷರು ಪತ್ರ ಕೊಡುವುದು ಬೇಡ ಎಂದು ಹೇಳಿದ್ದಾರೆ ಅದಕ್ಕಾಗಿ ಕೊಟ್ಟಿಲ್ಲಾ ಎಂದರು.
ನನ್ನ ಬಗ್ಗೆ ಹಗುರವಾಗಿ ಮಾತನಾಡುವುದು ಬಿಡ ಬೇಕು. ಹಡಗಿನಲ್ಲಿ ಕೂತವರು ಹೋಲು ಕೊರೆಯ ಬಾರದುಅವರ ಜೊತೆ ಎಲ್ಲರೂ ಮುಳುಗುತ್ತಾರೆಂದು ಈಶ್ವರಪ್ಪ ಹಾಗೂ ಬೆಲ್ಲದ್ ಗೆ ಟಾಂಗ್ ನೀಡಿದ್ದಾರೆ ರೇಣುಕಾಚಾರ್ಯ.
WATCH RENUKACHARYA VIDEO