‘ತಾಖತ್ ಇದ್ರೆ ಸೀಜ್ ಮಾಡಿರೋ ಮರಳನ್ನ ತುಂಬಿ ನೋಡೋಣ’ : ಬಂದ ತಕ್ಷಣ ದೊಡ್ಡ ಹಿರೋ ಏನ್ರೀ?

ದಾವಣಗೆರೆ: ‘ತಾಖತ್ ಇದ್ರೆ ಸೀಜ್ ಮಾಡಿರೋ ಮರಳನ್ನ ತುಂಬಿ ನೋಡೋಣ’, ಬಂದ ತಕ್ಷಣ ದೊಡ್ಡ ಹಿರೋ ಏನ್ರೀ?, ಮಟ್ಕಾ ಆಡೋರನ್ನ, ಜೂಜಾಡೋರನ್ನ ಹಿಡಿರಿ.. ಅದು ಬಿಟ್ಟು ಇಲ್ಲಿ ಸ್ಟಂಟ್ ಮಾಡೊಕೆ ಬಂದ್ರೆ ನಡೆಯಲ್ಲ…!
ಹೀಗೆಂದು ನೂತನ ಎಸ್ಪಿ ರಿಷ್ಯಂತ್ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಆವಾಜ್ ಹಾಕಿದ್ದಾರೆ.
ಎಸ್ಪಿ ಸೂಚನೆ ಮೇರೆಗೆ ನಿನ್ನೆ ಹೊನ್ನಾಳಿ ತಾಲೂಕಿನ ಹರಳಹಳ್ಳಿ, ಹಿರೇಮಳಲಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, ಮರಳು ವಶಕ್ಕೆ ಪಡೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಸಿಪಿಐ ದೇವರಾಜ್ ಅವರಿಗೆ ಕರೆ ಮಾಡಿ, ಎಸ್ಪಿಗೆ ಅವಾಜ್ ಹಾಕಿದ್ದಾರೆ.
ಮರಳು ಗಣಿಗಾರಿಕೆ ಮಾಡೋರೇನು ಅತ್ಯಾಚಾರ ಕೊಲೆ ಮಾಡಿದ್ದಾರಾ..? ಹೊಟ್ಟೆ ಪಾಡಿಗೆ ಮರಳು ಗಣಿಗಾರಿಕೆ ಮಾಡುತಿದ್ದಾರೆ. ಅವರ ತಂಟೆಗೆ ಬಂದರೆ ನಾನು ಸುಮ್ಮನಿರಲ್ಲ ಎಂದು ಆವಾಜ್ ಹಾಕಿರುವ ಅವರು, ತಾಕೀತು ಮಾಡಿರುವ ವೀಡೀಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.