ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಗೆ ಮನವಿ – ಬಿ ವಾಮದೇವಪ್ಪ.

Request for organization of Vishwa Kannada Sahitya Sammelan in Davangere - B Vamadevappa.

ದಾವಣಗೆರೆ: ಸರ್ಕಾರ ಈ ಹಿಂದೆಯೇ ದಾವಣಗೆರೆಯಲ್ಲಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಿತ್ತು. ಆದರೆ ಕೋವಿಡ್ ಕಾರಣದಿಂದ ಇದುವರೆಗೂ ನಡೆಯಲಾಗಿರುವುದಿಲ್ಲ. ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ನಿರ್ಣಯ ಕೈಗೊಳ್ಳಲಾಗಿತ್ತು. ಇತ್ತೀಚಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದಾವಣಗೆರೆಗೆ ಆಗಮಿಸಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಷಿ ಅವರಿಗೆ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪನವರು ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಬೇಕು. ಅದಕ್ಕೆ ಪೂರಕವಾದ ಅನುದಾನವನ್ನು ಸರ್ಕಾರ ಮುಂಗಡ ಪತ್ರ ದಲ್ಲಿ ಮೀಸಲಿಡುವಂತೆ ಸರ್ಕಾರದೊಂದಿಗೆ ತಾವುಗಳು ಮಾತನಾಡಿ ಒತ್ತಾಯ ಹೇರಬೇಕಾಗಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಜಿ ರುದ್ರಯ್ಯ, ಜಿಲ್ಲಾ ಕ ಸಾ ಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ ಜಿ ಜಗದೀಶ್ ಕೂಲಂಬಿ, ಜಿಲ್ಲಾ ಪದಾಧಿಕಾರಿ ಶ್ರೀಮತಿ ರುದ್ರಾಕ್ಷಿಬಾಯಿ, ತಾಲೂಕು ಕ ಸಾ ಪ ಅಧ್ಯಕ್ಷೆ ಶ್ರೀಮತಿ ಸುಮತಿ ಜಯಪ್ಪ, ತಾಲೂಕು ಪದಾಧಿಕಾರಿಗಳಾದ ಬೇತೂರು ಷಡಕ್ಷರಪ್ಪ, ಶಿವಕುಮಾರ್ ಆರ್, ಸದಾನಂದ ಕುಂಬಳೂರು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!