ಭಾಷಾ ನಗರದ ಆಸ್ಪತ್ರೆಗೆ ನೂತನ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರನ್ನ ನೇಮಕ ಮಾಡುವಂತೆ ಆಗ್ರಹ

WhatsApp Image 2022-02-04 at 8.01.48 PM

ದಾವಣಗೆರೆ: ದಾವಣಗೆರೆ ಹಳೆ ಭಾಗದ ಭಾಷಾ ನಗರದಲ್ಲಿರುವ ಪ್ರಸೂತಿ ಮತ್ತು ಅರ್ಬನ್ ಆಸ್ಪತ್ರೆ ಆಸ್ಪತ್ರೆಯಲ್ಲಿ ಮೂಲಭೂತ ಹಾಗೂ ಆಧುನಿಕ ಸೌಕರ್ಯಗಳ ಕೊರತೆ ಜೊತೆಗೆ ಸುಮಾರು ನಾಲ್ಕು ವರ್ಷಗಳಿಂದ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು ಅಲಭ್ಯವಾಗಿರುವುದರಿಂದ ಈ ಭಾಗದ ಪ್ರಸೂತಿ ಕೇಂದ್ರ ಇದ್ದು ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಆರೋಗ್ಯ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಆ ಭಾಗದಲ್ಲಿ ವಾಸಿಸುವ ಹೆಚ್ಚಿನವರು ಕಡು ಬಡವರು ಆಗಿದ್ದು ಇಲ್ಲಿ ಮಂಡಕ್ಕಿ ಭಟ್ಟಿ ಕಾರ್ಮಿಕರು,ಕಟ್ಟಡ ಕಾರ್ಮಿಕರು,ಕೂಲಿ ಕಾರ್ಮಿಕರು, ಆಟೋ ಚಾಲಕರು, ಬೀದಿ ವ್ಯಾಪಾರಸ್ಥರು, ವಾಸಿಸುತ್ತಾರೆ ಇಲ್ಲಿಯ ಜನರಿಗೆ ಸೌಲಭ್ಯಗಳು ಸಿಗುತ್ತಿಲ್ಲ ಸುಮಾರು 30 ವರ್ಷಗಳಿಂದ ಒಂದೇ ಪಕ್ಷದ ಶಾಸಕರಿದ್ದು ಇಲ್ಲಿನ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ ಜನರು ಹೆಚ್ಚಾಗಿ ಉತ್ತರಭಾಗದಲ್ಲಿ ಬರುವ ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುತ್ತಿದ್ದಾರೆ, ಅದರ ವೆಚ್ಚ ಭರಿಸಲು ಬಡ ಕಾರ್ಮಿಕ ವರ್ಗದವರಿಗೆ ಹೆಚ್ಚು ಭಾರವಾಗುತ್ತಿದೆ.

ಆದ ಕಾರಣ ನಮ್ ಪಕ್ಷದ ವತಿಯಿಂದ ತಮ್ಮಲ್ಲಿ ಆಗ್ರಹಿಸುವುದೇನೆಂದರೆ ಈ ಆಸ್ಪತ್ರೆಗೆ ಒಬ್ಬ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರನ್ನು ತಕ್ಷಣವೇ ನೇಮಕ ಮಾಡಿ ಆಸ್ಪತ್ರೆಯ ಹಳೆಯ ಕಟ್ಟಡವನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣವಾಗಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ ಅದರಲ್ಲಿ ಆಧುನಿಕ ಸ್ಕಾನಿಂಗ್ ಯಂತ್ರವನ್ನು ಅಳವಡಿಸಿ ಇನ್ನು ಮುಂತಾದ ಆರೋಗ್ಯಕ್ಕೆ ಸಂಬಂಧಪಟ್ಟ ಸೌಕರ್ಯಗಳನ್ನು ಒದಗಿಸಿ ಈ ಭಾಗದ ಜನರಿಗೆ ಶಾಶ್ವತವಾಗಿ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ತಮ್ಮಲ್ಲಿ ಆಗ್ರಹಿಸುತ್ತೇವೆ. ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಾಗೂ ಕಾನೂನಾತ್ಮಕ ಹೋರಾಟವನ್ನು ರೂಪಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!