ಟ್ರ್ಯಾಪ್ ಮಾಡಲು ಬಂದ ಎಸಿಬಿಗೆ ಚಳ್ಳೆಹಣ್ಣು ತಿನ್ನಿಸಿದ.! ಪೋಲಿಸರ ಮೇಲೆ ಕಾರು ಹತ್ತಿಸಲು ಯತ್ನಿಸಿ ಪರಾರಿಯಾದ ಆರ್ ಐ

ದಾವಣಗೆರೆ: ಎಸಿಬಿ ಪೊಲೀಸರ ಮೇಲೆ ಕಂದಾಯ ನಿರೀಕ್ಷಕನೊಬ್ಬ ಕಾರು ಹತ್ತಿಸಲು ಪ್ರಯತ್ನಿಸಿರುವ ಘಟನೆ ದಾವಣಗೆರೆ ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಸಿನೀಮಿಯ ರೀತಿಯಲ್ಲಿ ನಡೆದಿದೆ.
ದಾವಣಗೆರೆ ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಸಿದ್ದೇಶ್ ಎಂಬಾತ ಎಸಿಬಿ ಪೊಲೀಸರ ಮೇಲೆ ಕಾರು ಹತ್ತಿಸಲು ಪ್ರಯತ್ನಪಟ್ಟು ಪರಾರಿಯಾದ ಆರೋಪಿ. ಖಾಸಗಿ ವೈದ್ಯರೊಬ್ಬರು ತನ್ನ ಹೆಂಡತಿ ಹೆಸರಿನಲ್ಲಿ ಕೈದಾಳೆ ಗ್ರಾಮದಲ್ಲಿ ಎರಡು ಎಕರೆ 30 ಗುಂಟೆ ಜಮೀನು ಖರೀದಿಸಿದ್ದು, ಖಾತೆ ಬದಲಾವಣೆಗೆ ಆರ್‌ಐ ಸಿದ್ದೇಶ್ ಬಳಿ ಹೋಗಿದ್ದರು. ಹೀಗಿರುವಾಗ ಆರ್‌ಐ ಸಿದ್ದೇಶ್ 50 ಸಾವಿರಕ್ಕೆ ಡಿಮ್ಯಾಂಡ್ ಇಟ್ಟಿದ್ದ, ಅರ್ಧ ಹಣ ನೀಡಲಾಗಿತ್ತು. ಉಳಿದ 15,000 ರೂ. ಹಣ ಕೊಡುವುದು ಬಾಕಿಯಿತ್ತು. ಈ ಹಣ ಕೊಡಲು ಖಾಸಗಿ ವೈದ್ಯರಿಗೆ ಆರ್ ಐ ಶಿವಕುಮಾರಸ್ವಾಮಿ ಬಡಾವಣೆಯ ರಸ್ತೆಗೆ ಬರಲು ಹೇಳಿದ್ದಾರೆ. ಆಗ ಸಿದ್ದೇಶ್ ಕಾರಿನಲ್ಲಿ ಬಂದಿದ್ದಾರೆ. ಅಷ್ಟೋತ್ತಿಗೆ ಎಸಿಬಿ ಟ್ರ್ಯಾಪ್ ತಂಡ ಸ್ಥಳಕ್ಕೆ ಆಗಮಿಸಿ ಇವರ ಚಲನವಲನವನ್ನ ದೂರದಿಂದ ನೋಡುತ್ತಿರುತ್ತಾರೆ. ಹಣ ಕೊಡುವ ವೇಳೆ ಎಸಿಬಿ ಟ್ರ್ಯಾಪ್ ತಂಡಕ್ಕೆ ಖಾಸಗಿ ವ್ಯಕ್ತಿ ಸಿಗ್ನಲ್ ನೀಡಿದ್ದಾರೆ. ಆಗ ಆರ್‌ಐ ಸಿದ್ದೇಶ್ ಕಾರನ್ನು ಎಸಿಬಿ ಟ್ರ್ಯಾಪ್ ತಂಡ ಸುತ್ತುವರಿದಿದೆ. ಈ ಸಂದರ್ಭದಲ್ಲಿ ಆರ್‌ಐ ಸಿದ್ದೇಶ್ ಎಸಿಬಿ ಪೊಲೀಸರ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿ ಪರಾರಿಯಾಗಿದ್ದಾರೆ.
ಟ್ರ್ಯಾಪ್ ಆಗಿದ್ದು ಹೀಗೆ, ಹಣ ಸ್ವೀಕರಿಸಲು ಸಿದ್ದೇಶ್ ಕಾರಿನಿಂದ ಕೆಳಗೆ ಇಳಿಯದೇ , ಕಾರಿನ ಡ್ರೈವರ್ ಸಿಟಿನಲ್ಲಿ ಕುತಿರುತ್ತಾರೆ ಹಾಗೂ ಕಾರು ಚಾಲನಾ ಸ್ಥಿತಿಯಲ್ಲಿರುತ್ತೆ. ಖಾಸಗಿ ವ್ಯಕ್ತಿ ಪ್ಯಾಂಟಿನ್ ಬಲಭಾಗದಿಂದ ಪಿನ್ತಾಲಿನ್ ಪುಡಿ ಸವರಿದ್ದ 15000 ಹಣ ಕೊಟ್ಟು, ತಲೆ ಕೆರೆದುಕೊಳ್ಳುವ ಮೂಲಕ ಸನ್ನೆ ಮಾಡುತ್ತಾನೆ. ಆಗ ಸಮೀಪದಲ್ಲಿದೆ ವಾಚ್ ಮಾಡುತ್ತಿದ್ದ ಎಸಿಬಿ ತಂಡ ಸಿದ್ದೇಶ್ ಇದ್ದ ಕಾರನ್ನು ಸುತ್ತುವರಿಯುತ್ತಾರೆ. ಈ ಸಂದರ್ಭದಲ್ಲಿ ಚಾಲನೆಯಲ್ಲಿದ್ದ ಸಿದ್ದೇಶ್ ಕಾರು ಸುತ್ತುವರಿದ ಎಸಿಬಿಯನ್ನು ವಂಚಿಸಿ ಕಾರನ್ನ ಚಲಾವಣೆ ಮಾಡಿಕೊಂಡು ಹೊರ ನಡೆಯುತ್ತಾರೆ. ಎಸಿಬಿ ತಂಡ ಆ ಕಾರನ್ನು ಚೇಸ್ ಮಾಡುವ ವೇಳೆ ಮಾಗನೂರು ಪೆಟ್ರೋಲ್ ಬಂಕ್ ಬಳಿ ಸಿದ್ದೇಶ್ ಪರಾರಿಯಾಗಿದ್ದಾರೆ. ಇಡೀ ದಿನ ಎಸಿಬಿ ತಂಡ ಹುಡುಕಾಡಿದರೂ, ಆರ್‌ಐ ಸಿದ್ದೇಶ್ ಸಿಗುವುದಿಲ್ಲ. ಪರಿಣಾಮ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಎಸಿಬಿ ಇನ್ಸೆಪೆಕ್ಟರ್ ಕಲ್ಲೇಶಪ್ಪ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಆರ್ ಐ ಸಿದ್ದೇಶ್ ಮೇಲೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
-ಜಯಪ್ರಕಾಶ್, ಎಸಿಬಿ ಎಸ್ ಪಿ
ದಾವಣಗೆರೆ ಪೂರ್ವವಲಯ.