ಅಕ್ರಮ ಪಡಿತರ ಅಕ್ಕಿ ಜಪ್ತಿ: ಫೆ.15 ರಂದು ದಾವಣಗೆರೆಯಲ್ಲಿ ಬಹಿರಂಗ ಹರಾಜು.

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳಲಾಗಿದ್ದ ಪಡಿತರ ಅಕ್ಕಿಯನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಪತ್ತೆ ಮಾಡಿ, ಜಪ್ತಿ ಮಾಡಿಕೊಳ್ಳಲಾದ ಧಾನ್ಯವನ್ನು ಫೆ.15 ರಂದು ಬೆಳಿಗ್ಗೆ 10.30ಕ್ಕೆ ದಾವಣಗೆರೆಯ ಟಿ.ಎ.ಪಿ.ಸಿ.ಎಂ.ಎಸ್(ಲಿ) ಗ್ರಾಮಾಂತರ ಸಗಟು ಮಳಿಗೆ, ಎಪಿಎಂಸಿ ಯಾರ್ಡ್, ಡಿ ಬ್ಲಾಕ್, ಎ.ಆರ್.ಸಿ ಗೋದಾಮು ಎಪಿಎಂಸಿ ಕಚೇರಿ ಹಿಂಭಾಗ ದಾವಣಗೆರೆ ಇಲ್ಲಿ ಬಹಿರಂಗ ಹರಾಜು ಮಾಡಲಾಗುವುದು, ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.
ದಾವಣಗೆರೆ ಗ್ರಾಮಾಂತರ ಪ್ರದೇಶದ ಹೆಬ್ಬಾಳ್ ಟೋಲ್ ಬಳಿ ಪೊಲೀಸ್ ಉಪನಿರೀಕ್ಷಕರು ಕಳೆದ ಜೂನ್ 25 ರಂದು 90.10 ಕ್ವಿಂ. ಅಕ್ಕಿ., ನ.03 ರಂದು ಎನ್.ಹೆಚ್ ರಸ್ತೆ ಅಪೂರ್ವ ರೆಸಾರ್ಟ್ ಎದುರು 246.20 ಕ್ವಿಂ. ಅಕ್ಕಿ ಹಾಗೂ ಡಿಸೆಂಬರ್ 07 ರಂದು ಅಣಜಿ ಕ್ರಾಸ್ ಹತ್ತಿರ 126.20 ಕ್ವಿಂ. ಅಕ್ಕಿ ಪತ್ತೆ ಮಾಡಿ, ಜಪ್ತಿ ಮಾಡಿಕೊಳ್ಳಲಾಗಿತ್ತು.
ಜಪ್ತಿ ಮಾಡಿಕೊಳ್ಳಲಾಗಿರುವ ಅಕ್ಕಿಯನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ, ಫೆ.15 ರಂದು ಬೆಳಿಗ್ಗೆ 10.30 ಕ್ಕೆ ಟಿ.ಎ.ಪಿಸಿ.ಎಂ.ಎಸ್(ಲಿ) ಗ್ರಾಮಾಂತರ ಸಗಟು ಮಳಿಗೆ, ಎಪಿಎಂಸಿ ಯಾರ್ಡ್, ಡಿ ಬ್ಲಾಕ್, ಎ.ಆರ್.ಸಿ ಗೋದಾಮು ಎಪಿಎಂಸಿ ಕಚೇರಿ ಹಿಂಭಾಗ ದಾವಣಗೆರೆ ಇಲ್ಲಿ ಬಹಿರಂಗ ಹರಾಜು ಮಾಡಲಾಗುವುದು.
ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಎಪಿಎಂಸಿ ಟ್ರೇಡ್ ಲೈಸೆನ್ಸ್‍ನೊಂದಿಗೆ ಹಾಜರಾಗಬೇಕು. ಬಿಡ್ಡುದಾರರು ಹರಾಜು ದಿನ ಒಂದು ಗಂಟೆ ಮುಂಚೆ ಬಂದು ಶೇ. 10 ರಷ್ಟು ಮೊಬಲಗನ್ನು ಮುಂಗಡ ಠೇವಣಿಯಾಗಿ ಇಡಬೇಕು. ತಪ್ಪಿದಲ್ಲಿ ಅಂತಹವರಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ದಾವಣಗೆರೆ ತಹಶೀಲ್ದಾರ್.ಬಿ.ಎನ್ ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.