Rowdy Sheeter: ದಾವಣಗೆರೆ ನಗರದ 52 ರೌಡಿಶೀಟರ್ ಮನೆಗಳಿಗೆ ಭೇಟಿ ಪರಿಶೀಲನೆ

ದಾವಣಗೆರೆ: ( Rowdy Sheeter) ದಾವಣಗೆರೆ ಪೋಲೀಸ್ ತಂಡ ಮುಂಜಾನೆ ರೌಡಿ ಶೀಟರ್ ಮನೆಗಳಿಗೆ ಬೇಟಿ ನೀಡಿ ತಪಸಾಣೆ ನಡೆಸಿದರು. ಬೇಟಿ ನೀಡಿದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಯಾವುದೇ ಕಾನೂನು ಬಾಹಿರ ಹಾಗೂ ಕಾನೂನು ಸುವ್ಯವಸ್ಥೆ ಗೆ ದಕ್ಕೆ ಬರುವಂತಹ ಕೃತ್ಯಗಳಲ್ಲಿ ತೊಡಗಬಾರದು ಎಂದು ಎಚ್ಚರಿಕೆ ಹಾಗೂ ಸೂಕ್ತ ಸೂಚನೆಗಳನ್ನು ನೀಡಿದರು.
ದಾವಣಗೆರೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧಿಕ್ಷರುಗಳಾದ ಶ್ರೀ ವಿಜಯ್ ಕುಮಾರ್ ಎಂ ಸಂತೋಷ್ ರವರು ಹಾಗೂ ಶ್ರೀ ಮಂಜುನಾಥ ಜಿ ರವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀ ಸ್ಯಾಮ್ ವರ್ಗೀಸ್ ಐಪಿಎಸ್ ರವರು ಹಾಗೂ ನಗರ ಡಿವೈಎಸ್ಪಿ ಶ್ರೀ ಶರಣ ಬಸವೇಶ್ವರ ಬಿ ರವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡಗಳು ಭಾಗವಹಿಸಿದ್ದರು.
ಇತ್ತೀಚಿಗೆ ನಡೆದ ದಾವಣಗೆರೆ ಕೊಲೆ ಪ್ರಕರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತು ಅಪರಾಧ ತಡೆ ನಿಟ್ಟಿನಲ್ಲಿ ದಾವಣಗೆರೆ ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ರೌಡಿಶೀಟರ್ ಗಳ ವಾಸ ಗೃಹಗಳಿಗೆ ದಿಢೀರನೆ ಬೇಟಿ ನೀಡಿ ಪರಿಶೀಲಿಸಿದರು. ಒಟ್ಟು 52 ರೌಡಿಶೀಟರ್ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಯಾವುದೇ ಕಾನೂನು ಬಾಹಿರವಾಗಿ ವಸ್ತುಗಳು ಕಂಡು ಬಂದಿರುವುದಿಲ್ಲ… ಬೇಟಿ ನೀಡಿದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಯಾವುದೇ ಕಾನೂನು ಬಾಹಿರ ಹಾಗೂ ಕಾನೂನು ಸುವ್ಯವಸ್ಥೆ ಗೆ ದಕ್ಕೆ ಬರುವಂತಹ ಕೃತ್ಯಗಳಲ್ಲಿ ತೊಡಗಬಾರದು ಎಂದು ಎಚ್ಚರಿಕೆ ಹಾಗೂ ಸೂಕ್ತ ಸೂಚನೆಗಳನ್ನು ನೀಡಿರುತ್ತಾರೆ.