ಆರ್‌ಟಿಐ ಕಾರ್ಯಕರ್ತ ಶ್ರೀಧರ್ ಭರ್ಬರ ಹತ್ಯೆ: ಬ್ರಷ್ಟ ಭೂಗಳ್ಳರಿಗೆ ಸಿಂಹ ಸ್ವಪ್ನವಾಗಿದ್ದ ವ್ಯಕ್ತಿ ಇನ್ನಿಲ್ಲ

ಹರಪನಹಳ್ಳಿ ( ವಿಜಯನಗರ): ಹರಪನಹಳ್ಳಿ ಪಟ್ಟಣದ ಆರ್‌ಟಿಐ ಕಾರ್ಯಕರ್ತ ಶ್ರೀಧರ್ (38) ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದಾರೆ. ಗುರುವಾರ ಸಂಜೆ ಮಾರಕಾಸ್ತ್ರಗಳೊಂದಿಗೆ ಬಂದಿದ್ದ ದುಷ್ಕರ್ಮಿಗಳ ತಂಡ ಶ್ರೀಧರ್ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಗಾಯಾಳಾಗಿದ್ದ ಶ್ರೀಧರ್ ಅವರನ್ನ ಆಸ್ಪತ್ರೆಗೆ ತರುವಾಗ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಲವು ಜನರಿದ್ದ ಗುಂಪು ಹತ್ಯೆ ಮಾಡಿ ಪರಾರಿಯಾಗಿದೆ. ಪಟ್ಟಣದ ಎಡಿಬಿ ಕಾಲೇಜಿನ ಆವರಣದಲ್ಲಿ ಶ್ರೀಧರ್ ಕ್ಯಾಂಟೀನ್ ಹಿಂಭಾಗದ ಸ್ಥಳದಲ್ಲಿ ಟೀ ಕುಡಿಯುತ್ತಾ ಕುಳಿತಿದ್ದಾಗ ಸಂಜೆ ವೇಳೆಯಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದ ನಾಲ್ವರು ದುಷ್ಕರ್ಮಿಗಳು, ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದು ಪರಾರಿಯಾಗಿದ್ದಾರೆ. ಹೊಟೆಲ್ ಸಿಬ್ಬಂದಿ ಘಟನೆ ಬಗ್ಗೆ ಪೊಲೀಸ್ ರಿಗೆ ಮಾಹಿತಿ ನೀಡಿದ್ದಾರೆ ನಂತರ ಶ್ರೀಧರ್ ಅವರನ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಹಲವು ವರ್ಷಗಳಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದು,ಗಣಿಗಾರಿಕೆ, ಅತಿಕ್ರಮಣ, ಸರ್ಕಾರಿ ಭೂಮಿ ಒತ್ತುವರಿ, ಅನಧಿಕೃತ ಕಲ್ಲು ಗಣಿಗಾರಿಕೆ ಹೀಗೆ ಹಲವು ವಿಷಯಗಳ ಬಗ್ಗೆ ದೂರು ದಾಖಲಿಸಿದ್ದರು. ಕೆಲ ವರ್ಷಗಳಿಂದ ಹಲವು ಪ್ರಕರಣಗಳು ಕಾನೂನಿನಡಿ ಇತ್ಯರ್ಥಗೊಂಡಿದ್ದರೆ, ಕೆಲವು ಪ್ರಮುಖ ವ್ಯಕ್ತಿಗಳ, ಸಂಸ್ಥೆಗಳ ವಿರುದ್ದ ಪ್ರಕರಣಗಳು ಬಳ್ಳಾರಿ ಜಿಲ್ಲಾಧಿಕಾರಿ ನ್ಯಾಯಾಲಯ, ಬೆಂಗಳೂರು ಲೋಕಾಯುಕ್ತ, ಹೈ ಕೋರ್ಟ್ ನಲ್ಲಿ ಆದೇಶದ ಹಂತದಲ್ಲಿ ಇದ್ದವು.
ಭ್ರಷ್ಟ ರಿಗೆ ಸಿಂಹಸ್ವಪ್ನವಾಗಿದ್ದ ಆರ್ ಟಿ ಐ ಕಾರ್ಯಕರ್ತ ಶ್ರೀಧರ್ ಹತ್ಯೆಯಿಂದ ಹರಪನಹಳ್ಳಿ ಪಟ್ಟಣ, ರಾಜ್ಯಾದ್ಯಂತ ಆರ್ ಟಿ ಐ ಕಾರ್ಯಕರ್ತರಲ್ಲಿ ಸಾಮಾನ್ಯ ನಾಗರಿಕರಲ್ಲಿ ಆತಂಕ ಮೂಡಿಸಿದೆ. ಸದ್ಯ ಹರಪನಹಳ್ಳಿ ಪೊಲೀಸ್ ಹಲವರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಇನ್ಸಪೆಕ್ಟರ್ ನೇತೃತ್ವದಲ್ಲಿ ಮೂರು ತನಿಖಾ ತಂಡಗಳನ್ನು ರಚಿಸಿದ್ದು ದುಷ್ಕರ್ಮಿಗಳ ಪತ್ತೆಗೆ ಭಲೆ ಬಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಂದಿನಿಂದ ಆರ್ ಟಿ ಐ ಕಾರ್ಯಕರ್ತರ ಮೇಲೆ ಹಲ್ಲೆ, ಹತ್ಯೆ,ಬೆದರಿಕೆ, ನಡೆಯುತ್ತಿದ್ದರೂ ಸರ್ಕಾರ ಮೌನವಹಿಸಿದೆ, ಕರ್ನಾಟಕ ರಾಜ್ಯ ಗೂಂಡಾ ರಾಜ್ಯವಾಗುತ್ತಿದೆ ,ಆರ್ ಟಿ ಐ ಕಾರ್ಯಕರ್ತರಿಗೆ ರಕ್ಷಣೆ ಮರೀಚಿಕೆಯಾಗಿದೆ ಹಾಗಾಗಿ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ನವರು ರಾಜಿನಾಮೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಹಕ್ಕು ಮಾಹಿತಿ ಹೋರಾಟಗಾರರ ರಾಜ್ಯಾಧ್ಯಕ್ಷರು
ಎಸ್ ಪ್ರಕಾಶ್ ಮೂರ್ತಿ ಆಗ್ರಹಿಸಿದ್ದಾರೆ.
.