ಸಾರ್ವಜನಿಕರಿಗೆ ಸಂತೋಷದ ಮಾಹಿತಿ, ಕೊವಿಡ್ ಅರ್.ಟಿ ಪಿ.ಸಿ.ಆರ್. ಪರೀಕ್ಷೆಗೆ ರೂ.800 ನಿಗದಿ,ದಾವಣಗೆರೆ ಡಿ ಹೆಚ್ ಓ ನಾಗರಾಜ್

ದಾವಣಗೆರೆ: ಕೋವಿಡ್-19 ಪರೀಕ್ಷೆ ನಡೆಸುವ ಸಂಬಂಧ ಐ.ಸಿ.ಎಂ.ಆರ್ ಹಾಗೂ ರಾಜ್ಯ ಸರ್ಕಾರವು ನಿಗದಿ ಪಡಿಸಿದಂತೆ ಎಲ್ಲಾ ಷರತ್ತುಗಳು ಖಾಸಗಿ ಪ್ರಯೋಗ ಶಾಲೆಗೆ ಅನ್ವಯಿಸುತ್ತದೆ. ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ ಮಾದರಿಗಳನ್ನು ಖಾಸಗಿ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸಲು, ಸಾರಿಗೆ ಮತ್ತು ನಿರ್ವಹಣಾ ವೆಚ್ಚ ಸೇರಿದಂತೆ ಸಾರ್ವಜನಿಕರಿಗೆ ಆರ್.ಟಿ-ಪಿ.ಸಿ.ಆರ್. ಪರೀಕ್ಷೆಗಾಗಿ ರೂ.800 ಗಳನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ.