ಓಟದ ಸ್ಪರ್ಧೆ: ಅಂತಾರಾಷ್ಟ್ರೀಯ ಕ್ರೀಡಾಪಟು ಲಕ್ಷ್ಮಣ್ ರಾವ್ ಸಾಳಂಕಿ ಪ್ರಥಮ ಸ್ಥಾನ
ದಾವಣಗೆರೆ, ನ.06: ದಾವಣಗೆರೆ ನಗರದ ಅಂತಾರಾಷ್ಟ್ರೀಯ ಕ್ರೀಡಾಪಟು ಲಕ್ಷ್ಮಣ್ ರಾವ್ ಸಾಳಂಕಿ ಅವರು 70+ ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಭಾಗವಹಿಸಿ 5000 ಮೀ ಹಾಗೂ 10000 ಮೀಟರ್ ಓಟದ ಸ್ಪರ್ಧೆಯಲ್ಲಿ (running race) ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ
ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ ಗೇಮ್ಸ್-2023ವತಿಯಿಂದ ಆರ್.ಎನ್. ಶೆಟ್ಟಿ ಇಂಡೋರ್ ಮತ್ತು ಔಟ್ ಡೋರ್ ಸ್ಟೇಡಿಯಂ, ಧಾರವಾಡ ಹಾಗೂ ಮಲ್ಲಸಜ್ಜನ್ ವ್ಯಾಯಾಮ ಶಾಲಾ, ಧಾರವಾಡ ಮತ್ತು ಪ್ಲಾಶ್ ಸ್ವಿಮ್ಮಿಂಗ್ ಫೂಲ್, ಹುಬ್ಬಳ್ಳಿ ಮತ್ತು ಕೆಸಿಡಿ ಫುಟ್ಬಾಲ್ ಗ್ರೌಂಡ್ ಮತ್ತು ಡಿಡಿಎಲ್ ಟಿಎ ಪೆವಿಲಿಯನ್, ಧಾರವಾಡದ ಈ ಸ್ಥಳಗಳಲ್ಲಿ ದಿ. 4 ಮತ್ತು 5ರ ನವೆಂಬರ್ 2023ರಂದು ಏರ್ಪಡಿಸಲಾಗಿದ್ದ 5000 ಮೀ ಹಾಗೂ 10000 ಮೀಟರ್ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.
sports; ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ
5000 ಮೀ ಹಾಗೂ 10000 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕ ಹಾಗೂ 400 ಮೀ ಓಟದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಪಡೆಯುವಲ್ಲಿ ತೃಪ್ತರಾಗಿದ್ದಾರೆ ಹಾಗೂ 800 ಮೀ ಓಟದ ಸ್ಪರ್ಧೆಯಲ್ಲೂ ಭಾಗವಹಿಸಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾರೆ. ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.