ಸೀತಮ್ಮ ಬಾಲಕೀಯರ ಪ್ರೌಡಶಾಲೆಗೆ 2022-23 ನೇ ಸಾಲಿಗೆ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಎಸ್.ಬಿ.ಕುಬೇರಪ್ಪ ಆಯ್ಕೆ

ದಾವಣಗೆರೆ: ದಾವಣಗೆರೆ ನಗರದ ಸೀತಮ್ಮ ಬಾಲಕೀಯರ ಪ್ರೌಡಶಾಲೆಗೆ ಅವರಗೆರೆ ನಿವಾಸಿ ಎಸ್.ಬಿ. ಕುಬೇರಪ್ಪ ಇವರನ್ನ 2022-23 ನೇ ಸಾಲಿಗೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಶಾಲೆಯ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಛಾಯಾ ಎಸ್ .ಕೆ ತಂದೆಯಾದ ಎಸ್.ಬಿ ಕುಬೇರಪ್ಪ ದಾವಣಗೆರೆ ನಗರದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರನ್ನು ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರ ನೇತೃತ್ವದ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.

s-b-kuberappa-elected-as-sdmc-president-for-seethamma-girls-high-school-for-the-year-2022-23

Leave a Reply

Your email address will not be published. Required fields are marked *

error: Content is protected !!