ಸಂಸದರು ಹಾಗೂ ಶಾಸಕರು ಕ್ಷೇತ್ರಕ್ಕೆ ತಾವು ತಂದಿರುವ ಅನುದಾನದ ಮಾಹಿತಿ ನೀಡಲಿ – ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ :ಹರಿಹರ ಕ್ಷೇತ್ರದ ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್ ರವರು ಶಾಸಕರಾದ ಎಸ್.ರಾಮಪ್ಪ ನವರಿಗೆ ತಮ್ಮ ಮೂರೂವರೆ ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಸಾರ್ವಜನಿಕರ ಮುಂದಿಡಲಿ ಎಂದು ಬಹಿರಂಗ ಸವಾಲು ಹಾಕಿದ್ದು, ಇದೇ ಮಾದರಿಯಲ್ಲಿ ನಮ್ಮ ಸಂಸದರು ತಮ್ಮ 17 ವರ್ಷ ಅವಧಿಯ ಅಧಿಕಾರದಲ್ಲಿ ಜಿಲ್ಲೆಗೆ ಎಷ್ಟು ಅನುದಾನ ತಂದಿದ್ದಾರೆ ಎಂದು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ.
ಕೇವಲ ಸಾರ್ವಜನಿಕ ಸಮಾರಂಭಗಳಲ್ಲಿ ಭಾಷಣ ಮಾಡುವುದು, ಯೋಜನೆಗಳನ್ನು ಶೀಘ್ರದಲ್ಲಿಯೇ ಎಂದು ಹೇಳುವ ಸಂಸದರು ತಮ್ಮ ಅವಧಿಯಲ್ಲಿ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ತಂದಂತಹ ಅನುದಾನದ ಮಾಹಿತಿಯನ್ನು ತಿಳಿಸಬೇಕು. ಹಾಗೂ ನಮ್ಮ ಜಿಲ್ಲೆಗೆ ಮಂತ್ರಿ ಸ್ಥಾನ ನೀಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಪಡಿಸಿದಾಗ, ಮಂತ್ರಿ ಸ್ಥಾನಕ್ಕಿಂತ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಮುಖ್ಯ ಮಂತ್ರಿಗಳು ಹೆಚ್ಚಿನ ಅನುದಾನ ನೀಡುತ್ತಿದ್ದಾರೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿರುವ ಶಾಸಕರುಗಳು, ಸರ್ಕಾರದಿಂದ ತಮ್ಮ ತಮ್ಮ ಕ್ಷೇತ್ರಗಳಿಗೆ ಎಷ್ಟು ಅನುದಾನ ತಂದಿದ್ದೀರಾ ಎಂಬುದರ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿಬೇಕು.
*ಕೆ.ಎಲ್.ಹರೀಶ್ ಬಸಾಪುರ.*