ಸಚಿವ ಬೈರತಿ ಬಸವರಾಜ ರಿಂದ ಜಗಳೂರಿನಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಜಗಳೂರು ಟೌನ್ ಕೆ.ಇ.ಬಿ ವೃತ್ತದಲ್ಲಿ ವಿಶೇಷ ಅನುದಾನ ದಲ್ಲಿ ನಿರ್ಮಿಸಿರುವ ದ್ವಿಮುಖ ರಸ್ತೆ ಮತ್ತು ವಿದ್ಯುದೀಕರಣ ಕಾಮಗಾರಿ ಹಾಗೂ ಐ.ಬಿ ರಸ್ತೆಯಿಂದ ಚಳ್ಳಕೆರೆ ರಸ್ತೆ ವರೆಗೂ ವಿದ್ಯುದೀಕರಣ ಕಾಮಗಾರಿ ಮತ್ತು ವಾರ್ಡ್ ನಂಬರ್ ಒಂದರಿಂದ 18ನೇ ವಾರ್ಡ ವರೆಗೆ ಮಿನಿ ಹೈಮಾಸ್ಟಾ ದೀಪ ಅಳವಡಿಕೆ ಕಾಮಗಾರಿಗೆ ಶಂಕುಸ್ಥಾಪನೆ ಯನ್ನು ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎ.ಬಸವರಾಜ ಅವರು ದಿನಾಂಕ 13-7-2022 ರಂದು ನೆರವೇರಿಸಿದರು.
ಜಗಳೂರು ಟೌನ್ ನಲ್ಲಿ ಇರುವ ತರಳಬಾಳು ಕೇಂದ್ರದಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಮಾನ್ಯ ಸಚಿವರು ಚಾಲನೆ ನೀಡಿದರು. ಅಲ್ಲದೆ ಕೃಷಿ ಇಲಾಖೆ ವತಿಯಿಂದ ಕೀಟ ನಾಶಕ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಜಗಳೂರು ತಾಲ್ಲೂಕಿನಲ್ಲಿ ನಡೆದ ವಿವಿಧ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರಾದ ಎಸ.ವಿ.ರಾಮಚಂದ್ರ ವಹಿಸಿದ್ದರು.
ದಾವಣಗೆರೆ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ, ಪೊಲೀಸ್ ವರಿಷ್ಟಾಧಿಕಾರಿ ಸಿ ಬಿ ರಿಷ್ಯಂತ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.