ಸಚಿವ ಸ್ಥಾನ ಕೈತಪ್ಪಿರುವ ಕಾರಣ ಯಾರು ಕೂಡ ರಾಜೀನಾಮೆ ನೀಡಲ್ಲ: ನಳೀನ್ ಕುಮಾರ್ ಕಟೀಲ್

 

ಬೆಂಗಳೂರು: ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಕೆಲವು ಶಾಸಕರುಗಳಿಗೆ ತೀವ್ರ ನಿರಾಸೆಯಾಗಿದ್ದು, ಹಿರಿಯ ಶಾಸಕರನ್ನು ಕಡೆಗಣಿಸಿರುವುದರಿಂದ ಈಗ ಬಿಜೆಪಿಯ ವರಿಷ್ಠರು ಅವರನ್ನು ಸಮಾಧಾನ ಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷವು ಯಾರನ್ನು ಕಡೆಗಣಿಸಿಲ್ಲ. ಮುಂದಿನ ಚುನಾವಣೆ ದೃಷ್ಟಿಯಿಂದ ಹಿರಿಯರನ್ನ ಪಕ್ಷದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

ಪಕ್ಷದಲ್ಲಿ ಸಚಿವ ಸ್ಥಾನ ಕೈತಪ್ಪಿರುವ ಕಾರಣ ಯಾರು ಕೂಡ ರಾಜೀನಾಮೆ ನೀಡಲ್ಲ. ಅವರೆಲ್ಲರೂ ಪಕ್ಷ ನಿಷ್ಠೆ ಹೊಂದಿರುವ ಶಾಸಕರು. ಹಾಗಾಗಿ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದರು.

ಮಂತ್ರಿ ಸ್ಥಾನ‌ತಪ್ಪಿರುವುದರಿಂದ ಸಹಜವಾಗಿಯೇ ಅಸಮಾಧಾನ ಇರುತ್ತೆ, ಅವರನ್ನ ಕರೆದು ಸಮಾಧಾನ ಪಡಿಸುವ ಕೆಲಸ ಮಾಡಲಾಗುತ್ತದೆ. ನಾವೆಲ್ಲಾ ಒಗ್ಗೂಡಿ ಮುಂಬರುವ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.

ಈಗ ಒಳ್ಳೆಯ ತಂಡ ರಚನೆ ಮಾಡಲಾಗಿದೆ. ಈಗ ಜವಾಬ್ದಾರಿ ತೆಗೆದುಕೊಂಡು ಮಂತ್ರಿ ಸ್ಥಾನ ಪಡೆದ ಎಲ್ಲಾ ಶಾಸಕರು ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!