ಸದೃಢಗೊಂಡ ಸಹಕಾರ ಕ್ಷೇತ್ರ

IMG-20210713-WA0018

ದಾವಣಗೆರೆ.ಜು.13; ಕೇಂದ್ರ ಸರ್ಕಾರ ಸಹಕಾರ ಸಚಿವಾಲಯ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಅಧ್ಯಕ್ಷ ಜೆ.ಎಸ್ ವೇಣುಗೋಪಾಲ ರೆಡ್ಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ದೇಶದ ಸಹಕಾರಿ ಚಳುವಳಿಗೆ 117 ವರ್ಷಗಳ ಇತಿಹಾಸವಿದೆ. ಸಹಕಾರಿ ಕ್ಷೇತ್ರ ಏಳುಬೀಳುಗಳ ಮಧ್ಯೆ ಗಣನೀಯ ಸಾಧನೆ ಮಾಡಿದೆ. ಇದೀಗ ಕೇಂದ್ರ ಸರ್ಕಾರ ಸಹಕಾರ ಸಚಿವಾಲಯ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ.ಹೊಸ ಸಚಿವಾಲಯವು ಪರಿಣಾಮಕಾರಿಯಾಗಿ

ಕಾರ್ಯನಿರ್ವಹಿಸಲಿದೆ.ಇಲ್ಲಿಯವರೆಗೂ ಸರ್ಕಾರದ ಹಸ್ತಕ್ಷೇಪ ಇರಲಿಲ್ಲ ಇನ್ನುಮುಂದೆ ಸರ್ಕಾರದ ಅನುದಾನ ಬರಲಿದೆ ಇದು ಸಹಕಾರಿ ವಲಯವನ್ನು ಸದೃಡಗೊಳಿಸಲಿದೆ ಎಂದರು.ರಾಜ್ಯದಲ್ಲಿ 264 ಸಹಕಾರಿ ಬ್ಯಾಂಕ್ ಗಳಿದ್ದು 1145 ಶಾಖೆಗಳಿವೆ. ಜಿಲ್ಲೆಯಲ್ಲಿ 192 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಜಿಲ್ಲೆಯ ರೈತ ಸದಸ್ಯರುಗಳಿಗೆ ಸಾಲಸೌಲಭ್ಯ ನೀಡಲಾಗಿದೆ. 2020-21ನೇ ಸಾಲಿನಲ್ಲಿ ಬ್ಯಾಂಕು ಒಟ್ಟು ರೂ .123.43 ಲಕ್ಷಗಳ ಲಾಭ ಗಳಿಸಿದೆ. ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ನೂತನ ಸಹಕಾರ ಸಚಿವಾಲಯದಿಂದ ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುತ್ತದೆ ಹಾಗೂ ಸಹಕಾರ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಹೊಂದಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೊರೊನಾದಿಂದ ಮೃತಪಟ್ಟ ಸದಸ್ಯರ ಕುಟುಂಬದವರಿಗೂ ನೆರವು ನೀಡಲಾಗಿದೆ. ಜಿಲ್ಲೆಯ ಗ್ರಾಹಕರುಗಳಿಗೆ ತ್ವರಿತ ಹಾಗೂ ಸುಲಭ ಬ್ಯಾಂಕಿಂಗ್ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ, ಕೆ.ಸಿ.ಸಿ. ಸಾಲ ಪಡೆದ ರೈತರಿಗೆ ರೂಪೇ ಕೆ.ಸಿ.ಸಿ ಕಾರ್ಡ ಹಾಗೂ ವೈಯಕ್ತಿಕ ಅಪಘಾತ ವಿಮೆ ಯೋಜನೆಯನ್ನು ಅಳವಡಿಸಲಾಗಿದೆ . ಗ್ರಾಹಕರುಗಳಿಗೆ ಡೆಬಿಟ್ ಕಾರ್ಡ ಹಾಗೂ ಎಸ್.ಎಂ.ಎಸ್ ಅಲರ್ಟ ಸೇವೆಯನ್ನು ಅನುಷ್ಠಾನಗೊಳಿಸಲಾಗಿದೆ . 2019-20 ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಬ್ಯಾಂಕು ಏ ಶ್ರೇಣಿಯನ್ನು ಪಡೆದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎನ್.ಎ.ಮುರುಗೇಶ್, ಜಿ.ಎನ್.ಸ್ವಾಮಿ, ಬಿ.ಶೇಖರಪ್ಪ ಇದ್ದರು.

Leave a Reply

Your email address will not be published. Required fields are marked *

error: Content is protected !!