ಸಹಕಾರ ಸಚಿವಾಲಯ ಸ್ಥಾಪನೆಗೆ ಸ್ವಾಗತ

ದಾವಣಗೆರೆ.ಜು.೧೩; ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಹಾಗೂ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಕೇಂದ್ರ ಸರ್ಕಾರದ ಹಂತದಲ್ಲಿ ಅತ್ಯಗತ್ಯವಾಗಿದ್ದ ಪ್ರತ್ಯೇಕ ಸಹಕಾರ ಸಚಿವಾಲಯ ರಚನೆಯಾಗಿರುವುದು ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮ್ಯಾಮ್ ಕೋಸ್ ನಿರ್ದೇಶಕರಾದ ಭೀಮರಾವ್ ಅಭಿಪ್ರಾಯ ಸೂಚಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ದೇಶದ ಸಹಕಾರಿ ಚಳುವಳಿಯಲ್ಲಿ ಮೈಲುಗಲ್ಲಾಗಲಿರುವ ಈ ಐತಿಹಾಸಿಕ ನಿರ್ಣಯದಿಂದ ಸಾಕಷ್ಟು ಅನುಕೂಲ ದೊರೆಯಲಿದೆ.ಜೊತೆಗೆ ಭದ್ರತೆ ಸಿಗಲಿದೆ ಈ ಮೊದಲು ೧ ಲಕ್ಷ ಠೇವಣಿಯಿತ್ತು ಇದೀಗ ೫ ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಇದರಿಂದ ಆರ್ಥಿಕ ಭದ್ರತೆ ಸಿಗಲಿದೆ.ದೇಶದಲ್ಲಿ 8.5 ಲಕ್ಷ ವಿವಿಧ ರೀತಿಯ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ . ಈ ಚಳುವಳಿಯಲ್ಲಿ 30 ಕೋಟಿಗಿಂತ ಹೆಚ್ಚು ಸದಸ್ಯರಾಗಿ ತೊಡಗಿಸಿಕೊಂಡಿದ್ದಾರೆ .3,83,285 ರೂ ಮಿಲಿಯನ್‌ನಷ್ಟು ಷೇರು ಬಂಡವಾಳವನ್ನು ಸಹಕಾರಿ ಕ್ಷೇತ್ರ ಹೊಂದಿದೆ .
ದೇಶದ ಶೇ .95 ಗ್ರಾಮಗಳಲ್ಲಿ ಅಂದರೆ 6,30 ಲಕ್ಷ ಗ್ರಾಮಗಳಲ್ಲಿ ಸಹಕಾರ ಕ್ಷೇತ್ರ ವ್ಯಾಪಿಸಿದೆ . ಸಹಕಾರ ಕ್ಷೇತ್ರ ದೇಶದ ಜನರ ಜೀವನ ಪದ್ಧತಿಯಾಗಿ ಬೆಳೆದಿದೆ . ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರ ತಜ್ಞರು ವಿವರಿಸುವಂತೆ ಶೇ .40 ರಷ್ಟು ಪಾಲನ್ನು ಸಹಕಾರ ಕ್ಷೇತ್ರದ ಮೂಲಕವೇ ನಿರ್ವಹಿಸಲಾಗುತ್ತಿದೆ . ಸಹಕಾರಿ ಕ್ಷೇತ್ರದ ಮೂಲಕ ಸರ್ಕಾರದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿ.ಎನ್ ಸ್ವಾಮಿ,ಅಣ್ಣೇಶ್,ಜಿ.ಬಿ ಸೋಮಶೇಖರಪ್ಪ ಇದ್ದರು.