Sand Block: ಮರಳು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗೆ ಮನವಿ

ದಾವಣಗೆರೆ: ( Sand Block) ಗಣಿ ಮತ್ತು ಭೂವಿಜ್ಞಾನ ಇಲಾಖೆ ದಾವಣಗೆರೆ ಇವರ ವತಿಯಿಂದ ಮರಳು ಟೆಂಡರ್ ಕರೆದು ಸುಮಾರು 4 ತಿಂಗಳು ಕಳೆದರು ಟೆಂಡರ್ ಪ್ರಕ್ರಿಯನ್ನು ಪೂರ್ಣಗೊಳಿಸಿಲ್ಲ. ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಜಿಲ್ಲ್ಲಾ ಗುತ್ತಿಗೆದಾರರ ಸಂಘ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.
ಈ ಬಗ್ಗೆ ಸಂಘದ ಅಧ್ಯಕ್ಷ ಕೆ.ಎಸ್. ನಾಗರಾಜ್ ಟೆಂಡರ್ ಕರೆದು ಸುಮಾರು 4 ತಿಂಗಳು ಕಳೆದರು ಟೆಂಡರ್ ಪ್ರಕ್ರಿಯನ್ನು ಪೂರ್ಣಗೊಳಿಸದೇ ವಿಳಂಬವಾಗಿರುವುದರಿAದ ಇಎಂಡಿ ಮೊತ್ತವು ಸುಮಾರು 10 ಲಕ್ಷ ರೂ., ಗಳಿಂದ 15 ಲಕ್ಷ ರೂ., ಗಳವರೆಗೆ ಪಾವತಿಸಿರುತ್ತಾರೆ.
ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಇರುವುದರಿಂದ ಗುತ್ತಿಗೆದಾರರಿಗೆ ಆರ್ಥಿಕವಾಗಿ ತೊಂದರೆಯಾಗಿದೆ. ಆದ್ದರಿಂದ ತಾವುಗಳು ಟೆಂಡರ್ ಪ್ರಕ್ರಿಯೆಯಲ್ಲಿ ನಿಷ್ಪಕ್ಷಪಾತವಾಗಿ ಟೆಂಡರ್ ಪ್ರಕ್ರಿಯೆಯನ್ನು ಅತೀ ಶೀಘ್ರದಲ್ಲೇ ಪೂರ್ಣಗೊಳಿಸಬೇಕೆಂದು ವಿನಂತಿಸಿದ್ದಾರೆ.