ಸಂಗೊಳ್ಳಿ ರಾಯಣ್ಣ ಹುಟ್ಟು ಹಬ್ಬ ಆಚರಣೆ.! ಮಕ್ಕಳ ಜೊತೆ ಅರ್ಥಪೂರ್ಣವಾಗಿ ಆಚರಿಸಿದ ರಾಯಣ್ಣ ಅಭಿಮಾನಿ

sangolli rayanna birthday

ದಾವಣಗೆರೆ: ದಿನಾಂಕ 15-8-2022 ರ ಸೋಮವಾರದಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುಟ್ಟು ಹಬ್ಬದ ಆಚರಣೆಯ ಪ್ರಯುಕ್ತ, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗ, ದಾವಣಗೆರೆ. ಇವರ ವತಿಯಿಂದ ಆಶ್ರಮದ ಮಕ್ಕಳಿಂದ ಕೇಕ್ ಕತ್ತರಿಸುವುದರ ಮುಖಾಂತರ ಹಾಗೂ ಆ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸುವುದರ ಮುಖಾಂತರ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಾಯಣ್ಣ ಅಭಿಮಾನಿ ಗಣೇಶ್ ಕೆ ದಾವಣಗೆರೆ, ಶ್ರೀ ದೇವರಾಜ ಪುಟಗನಾಳ್, ಮಾರುತಿ, ರಾಜು ಆನಗೋಡು, ರವಿಕುಮಾರ್, ಚನ್ನಪ್ಪ ಕರಿಯಮನಹಟ್ಟಿ, ಪರುಸು ಜಾಲಿನಗರ ನಾಗರಾಜ್, ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!