ಕಾರ್ಮಿಕ ದಿನಾಚರಣೆಯ ಪ್ರಯುಕ್ತ ವಲಸೆ ಕಾರ್ಮಿಕರಿಗೆ ಸಂಕಲ್ಪ ಫೌಂಡೇಶನ್ ವತಿಯಿಂದ ಮತದಾನ ಜಾಗೃತಿಯನ್ನು ಮಾಡಲಾಯಿತು

sankalpa

ದಾವಣಗೆರೆ ಜಿಲ್ಲೆ ದಾವಣಗೆರೆ ತಾಲೂಕು ಬೇತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಲಸೆ ಕಾರ್ಮಿಕರಿಗೆ ಮತದಾನದ ಅವಶ್ಯಕತೆ ಹಾಗೂ ಅದರ ಮಹತ್ವವನ್ನು ತಿಳಿಸುವ ಮೂಲಕ ಮತದಾನದ ಹಕ್ಕನ್ನು ಚಲಾಯಿಸುವ ಮತದಾನದ ಹಬ್ಬದಲ್ಲಿ ಭಾಗವಹಿಸಿ ಎಂದು ಸಂಕಲ್ಪ ಫೌಂಡೇಶನ್ ಜಾಗೃತಿ ಮೂಡಿಸಿತು
ಈ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಸಂಕಲ್ಪ ಫೌಂಡೇಶನ್ ನ ಉಪಾಧ್ಯಕ್ಷರಾದ ಅಭಿಷೇಕ್ ಅವರು ಮಾಹಿತಿ ನೀಡುತ್ತಾ ಮತದಾನ ನಮ್ಮೆಲ್ಲರ ಹಕ್ಕು ಈ ಒಂದು ಮತದಾನದ ಹಕ್ಕನ್ನು ಚಲಾಯಿಸುವುದರ ಮೂಲಕ ನಮ್ಮ ಹಕ್ಕು ಮತ್ತು ಆಯ್ಕೆ ಸಾಬೀತು ಮಾಡಿಸುವ ಸುವರ್ಣ ಅವಕಾಶ ಇದನ್ನು ಬಳಸಿಕೊಳ್ಳಿ ಎಂದು ಮಾಹಿತಿ ನೀಡಿದರು.


ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಮಮತಾ ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳಾದ ಗುಣಶೀಲ ಇವರು ಕಾರ್ಯಕ್ರಮದ ಕುರಿತು ಕಾರ್ಮಿಕರಿಗೆ ಮತದಾನದ ಸಂದರ್ಭದಲ್ಲಿ ತಾವುಗಳು ತಮ್ಮ ಸ್ಥಳಗಳಿಗೆ ಹೋಗಿ ಮತವನ್ನು ಚಲಾಯಿಸಿ ಮತ್ತೆ ಪುನಹ ತಮ್ಮ ದುಡಿಮೆ ಎಲ್ಲಿ ತೊಡಗಿಕೊಳ್ಳಬಹುದೆಂದು ಸಲಹೆ ನೀಡಿದರು ಹಾಗೂ ಸಂಕಲ್ಪ ಫೌಂಡೇಶನ್ ಕಾರ್ಯದರ್ಶಿಯಾದ ಅಂಜಿನಪ್ಪ ಡಿ ರವರು ಮತದಾನದ ಹಕ್ಕನ್ನು ನೀಡಲು ಅನೇಕ ಮಹನೀಯರ ಹೋರಾಟದ ಕೊಡುಗೆಯ ಪ್ರತಿಫಲ ಇಂದು ನಮ್ಮನ್ನ ಆಳುವ ವ್ಯಕ್ತಿಗಳ ಆಯ್ಕೆ ನಮ್ಮ ಕೈಯಲ್ಲಿದೆ ಈ ಒಂದು ಹಕ್ಕು ನಮಗೆ ಸಿಕ್ಕಿರುವುದು ಸಂವಿಧಾನ ದಿಂದ ಹಾಗಾಗಿ ತಾವುಗಳೆಲ್ಲರೂ ಖಂಡಿತವಾಗಿ ಈ ಒಂದು ಮತದಾನದ ಹಬ್ಬದಲ್ಲೇ ಭಾಗವಹಿಸುವ ಮೂಲಕ ಸವಿರುಚಿಯನ್ನು ಸವಿಯೋಣ ಎಂದು ತಿಳಿಸಿದರು. ಈ ಒಂದು ಸಂದರ್ಭದಲ್ಲಿ ಸದಸ್ಯರಾದ ಯಶವಂತ್ ಕುಮಾರ್ ಹಾಗೂ ಸ್ಥಳೀಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!