ದಾವಣಗೆರೆಯ ಧನ್ಯ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ “(ಕಣುಮ)” ಬಂಧನ.!

ವಿಜಯನಗರ ಎಸ್ ಪಿ ಅರುಣ್ ಕೆ. ವಿಡಿಯೋ ನೋಡಿ
ವಿಜಯನಗರ: ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಬಳಿಯ ಬೇವಿನಹಳ್ಳಿ ದೊಡ್ಡ ತಾಂಡಾದ ಹತ್ತಿರ ನಡೆದಿದ್ದ ದಾವಣಗೆರೆಯ ಜಿಮ್ ಟ್ರೈನರ್ ಧನ್ಯಕುಮಾರ್ ಅಲಿಯಾಸ್ ಧನು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಕುಮಾರ್ ಅಲಿಯಾಸ್ ಕಣುಮ ನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಕೊಲೆ ನಡೆದ ಎರಡು ದಿನಗಳಲ್ಲಿ ಧನ್ಯ ಕೊಲೆ ಮಾಡಿದ ರವಿ ಜಿ, ಮಲ್ಲಿಕಾರ್ಜುನ್, ಸುದೀಪ್ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು, ಪ್ರಮುಖ ಅರೋಪಿ ದಾವಣಗೆರೆಯ ಸಂತೋಷ್ ಕುಮಾರ್ ಅಲಿಯಾಸ್ ಕಣುಮ ಕುರಿತು ಮಾಹಿತಿ ನೀಡಿದ್ದರು. ಆರೋಪಿಗಳ ಹೇಳಿಕೆ ಆಧರಿಸಿ ಸಂತೋಷ ಕುಮಾರ್ ಬಂಧನಕ್ಕೆ ಪೊಲೀಸರು ಹುಡುಕಾಡುತ್ತಿದ್ದರು, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳದಲ್ಲಿ ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈಗಾಗಲೇ ಸಂತೋಷ್ ರೌಡಿ ಶೀಟರ್ ಆಗಿದ್ದಾನೆ ಎಂದು ವಿಜಯನಗರ ಜಿಲ್ಲಾ ವರಿಷ್ಠಾಧಿಕಾರಿ ಅರುಣ್ ಹೇಳಿದ್ದಾರೆ.
ಏಪ್ರಿಲ್.27ರಂದು ಧನ್ಯಕುಮಾರ್ ಸ್ನೇಹಿತರೊಂದಿಗೆ ಉಚ್ಚಂಗಿದುರ್ಗದ ಬಳಿಯ ತೋಪಿನಲ್ಲಿ ಊಟಕ್ಕೆ ತೆರಳಿದ್ದಾಗ 30-40 ಬಾರಿ ಚಾಕುವಿನಿಂದ ಇರಿದು ಭರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕುರಿತು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.