ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

IMG-20210805-WA0015

ದಾವಣಗೆರೆ: ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನ ನೇರ ಸಾಲ, ಐಎಸ್‌ಬಿ ಯೋಜನೆ, ಎಂಸಿಎಫ್ ಪ್ರೇರಣಾ ಯೋಜನೆ, ಭೂ ಒಡೆತನ ಯೋಜನೆ, ಪ್ರವಾಸಿ ಟ್ಯಾಕ್ಸಿ ಮತ್ತು ಸರಕು ಸಾಗಾಣಿಕೆ ವಾಹನ ಖರೀದಿ ಯೋಜನೆಗಳಿಗೆ ಸಫಾಯಿ ಕರ್ಮಚಾರಿಗಳು, ಮ್ಯಾನುಯಲ್ ಸ್ಕ್ಯಾವೆಂಜರ್ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರುಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ಯೋಜನೆಯಡಿ ನೇರ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಕಿರು ಆರ್ಥಿಕ ಚಟುವಟಿಕೆಗಳಾದ ತರಕಾರಿ, ಹಣ್ಣು-ಹಂಪಲು, ಮೀನು, ಮಾಂಸ ಮಾರಾಟ, ಕುರಿ, ಹಂದಿ, ಮೊಲ ಸಾಕಾಣಿಕೆ ತಳ್ಳುವ ಗಾಡಿ ಘಟಕಗಳನ್ನು ಸ್ಥಾಪಿಸಲು ದುಡಿಮೆ ಬಂಡವಾಳ ಮುಂತಾದ ಚಟುವಟಿಕೆಗಳಿಗೆ ಘಟಕ ವೆಚ್ಚ ರೂ.50 ಸಾವಿರವಿದ್ದು, ಈ ಪೈಕಿ ಶೇ.50 ರಷ್ಟು ಸಾಲ ಮತ್ತು ಶೇ. 50 ರಷ್ಟು ಸಹಾಯಧನ ಒದಗಿಸಲಾಗುವುದು.

ಉದ್ಯಮ ಶೀಲತಾ ಯೋಜನೆಯಡಿ ವಿವಿಧ ಸ್ವಯಂ ಉದ್ಯೋಗ ಘಟಕಗಳ ಉದ್ಯೋಗ ಐ.ಎಸ್.ಬಿ ಘಟಕಗಳ ಉದೇಶಕ್ಕೆ ಘಟಕ ವೆಚ್ಚದ ಶೇ.70 ರಷ್ಟು ಅಥವಾ ಗರಿಷ್ಠ ರೂ. ಒಂದು ಲಕ್ಷದವರೆಗೆ ಸಹಾಯಧನ ಹಾಗೂ ಒಂದು ಲಕ್ಷ ರೂ. ನಿಗಮದಿಂದ ಸಾಲ ಕೊಡಲಾಗುವುದು.

ಐರಾವತಾ ಯೋಜನೆಯಡಿ ಪ್ರವಾಸಿಟ್ಯಾಕ್ಸಿ ಹಾಗೂ ಸರಕು ಸಾಗಾಣಿಕೆ ವಾಹನ ಒದಗಿಸಲಾಗುವುದು. ಇದಕ್ಕಾಗಿ ಶೇ.50 ರಿಂದ ಶೇ.60 ಅಥವಾ ಗರಿಷ್ಠ 5 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುವುದು. ವಾಹನದ ಬಾಕಿ ಮೊತ್ತವನ್ನು ಬ್ಯಾಂಕ್ ಅಥವಾ ಇತರೆ ಹಣಕಾಸು ಸಂಸ್ಥೆಗಳಿಂದ  ಭರಿಸುವುದು.

ಮೈಕ್ರೋ ಕ್ರೆಡಿಟ್, ಪ್ರೇರಣಾ ಯೋಜನೆಯಡಿ, ಮಹಿಳಾ ಸ್ವ ಸಹಾಯ ಸಂಘಗಳ ಆರ್ಥಿಕ ಚಟುವಟಿಕೆಗಳಿಗಾಗಿ ಆರ್ಥಿಕ ನೆರವು ನೀಡಲಾಗುತ್ತದೆ (ಕನಿಷ್ಠ 10 ಸದಸ್ಯರು) (ಸ್ವ ಸಹಾಯ ಗುಂಪುಗಳಿಗೆ ಪ್ರತಿ ಸದಸ್ಯರಿಗೆ ರೂ.25 ಸಾವಿರ) ಸಹಾಯಧನ ರೂ.1,50,000 ಹಾಗೂ ಬೀಜಧನ ರೂ. ಒಂದು ಲಕ್ಷ ನೀಡಲಾಗುವುದು.

ಭೂ ಒಡೆತನ ಯೋಜನೆಯಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ತಮ್ಮ ವಾಸ ಸ್ಥಳದಿಂದ 10 ಕಿ.ಮೀ ವ್ಯಾಪ್ತಿಯೊಳಗೆ ಕೃಷಿಯೋಗ್ಯವಾದ 02 ಎಕರೆ ಖುಷ್ಕಿ ಅಥವಾ 01 ಎಕರೆ ತರಿ ಜಮೀನು ಖರೀದಿಸಲು (ಘಟಕ ವೆಚ್ಚ ರೂ.15 ಲಕ್ಷಗಳಿಂದ ರೂ.20 ಲಕ್ಷ) ಸಹಾಯಧನ ಮತ್ತು ಸಾಲ ನೀಡಲಾಗುವುದು.

ಅರ್ಜಿ ಸಲ್ಲಿಸುವ ಫಲಾಪೇಕ್ಷಿಗಳು ನಿಗಮದ ವೆಬ್ ಸೈಟ್ಮೂ  www.ksskdc.kar.nic.in
ಲಕ ಅಗತ್ಯ ದಾಖಲಾತಿಗಳೊಂದಿಗೆ ಸೆ. 20 ರೊಳಗೆ ಅರ್ಜಿಯನ್ನು ಅಪ್ಲೋಡ್ ಮಾಡಬಹುದು. ಸಲ್ಲಿಸಿದ ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯ ಮೂಲಕ ಗುರಿಗನುಗುಣವಾಗಿ ಫಲಾಪೇಕ್ಷಿಗಳನ್ನು ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ, ಗಣೇಶ್ ಲೇಔಟ್, 1ನೇ ಕ್ರಾಸ್, ಪಿ.ಬಿ.ರಸ್ತೆ, ದಾವಣಗೆರೆ ಇವರನ್ನು ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!