ಸರಕುಗಳ ಮಾಲಿಕರು ಲೋಡಿಂಗ್, ಅನ್ ಲೋಡಿಂಗ್ ವೆಚ್ಚವನ್ನು ಸರಕಿನ ಎಲ್ಲಾ ವ್ಯಾಪಾರಸ್ಥರು ಭರಿಸಬೇಕು – ಸಯ್ಯದ್ ಸೈಫುಲ್ಲಾ

ದಾವಣಗೆರೆ: ಸರಕುಗಳ ಮಾಲಿಕರು ಲೋಡಿಂಗ್, ಅನ್ ಲೋಡಿಂಗ್ ವೆಚ್ಚವನ್ನು ಲಾರಿಯವರಿಂದ ಪಡೆಯುವುದು ನಿಯಮ ಬಾಹಿರವಾಗಿದ್ದು, ಇನ್ನುಮುಂದೆ ತಮ್ಮ ಸರಕಿಗೆ ತಾವೆ ವೆಚ್ಚ ಭರಿಸುವಂತೆ ಕಾರ್ಮಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್ ಏಜೆಂಟರ್ ಸಂಘ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಸಂಘದ ಜಿಲ್ಲಾಧ್ಯಕ್ಷ ಸಯ್ಯದ್ ಸೈಫುಲ್ಲಾ ಮಾತನಾಡಿ,
ಎಲ್ಲಾ ವರ್ಗದ ವ್ಯಾಪಾರಸ್ಥರು ತಮ್ಮ ಸರಕಿಗೆ ಸಂಬಂಧಪಟ್ಟಂತೆ ಸ್ವಂತ ಖರ್ಚಿನಲ್ಲಿ ಭರಿಸಬೇಕೆಂದು ಕಾರ್ಮಿಕ ಆಯುಕ್ತರು ಆದೇಶ ಹೊರಡಿಸಿದ್ದು, ಡಿ.೮ರ ಇಂದಿನಿಂದಲೇ ವ್ಯಾಪಾರಸ್ಥರು ಆದೇಶ ಪಾಲಿಸುವಂತೆ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸಾರಿಗೆ ಉದ್ಯಮವು ಸಂಕಷ್ಟದಲ್ಲಿದ್ದು ಇಂತಹ ಸಂದರ್ಭದಲ್ಲಿ ಲಾರಿ ಮಾಲೀಕರಿಗೆ ಅನಾವಶ್ಯಕವಾಗಿ ಲೋಡಿಂಗ್, ಅನ್-ಲೋಡಿಂಗ್, ತಾಡಪಾಲು ಮಾಮೂಲು ಇತ್ಯಾದಿ ಖರ್ಚು ವೆಚ್ಚಗಳನ್ನು ನಮ್ಮ ಮೇಲೆಯೇ ಹಾಕುವುದರಿಂದ ಇದರಿಂದ ಉದ್ಯಮ ನಡೆಸುವುದೇ ಕಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘದಿಂದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರನ್ನು ಭೇಟಿ ಮಾಡಿ ಕಾಯ್ದೆಯ ನಿಯಾಮವಳಿಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಮನವಿ ಮಾಡಿದ್ದೆವು. ಅದರಂತೆ ಇನ್ನುಮುಂದೆ ವ್ಯಾಪಾರಸ್ಥರು ಲಾರಿಯವರಿಂದ ಯಾವುದೇ ಖರ್ಚು ವೆಚ್ಚ ಭರಿಸುವುದು ಕಾನೂನು ಬಾಹಿರವಾಗಿದ್ದು, ಕೂಲಿಯನ್ನು ಸರಕಿನ ಮಾಲಿಕರೇ ಭರಿಸಬೇಕೆಂದು ಕಾರ್ಮಿಕ ಆಯುಕ್ತರು ಆದೇಶ ಹೊರಡಿಸಿದ್ದು, ಅದು ಡಿ.೮ ರಿಂದಲೇ ಜಾರಿಯಾಗಲಿದೆ. ಆದ್ದರಿಂದ, ಸರಕಿನ ಮಾಲೀಕರು ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಸಹಕರಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಭೀಮಣ್ಣ, ಎಸ್.ಕೆ. ಮಲ್ಲಿಕಾರ್ಜುನ್ ಇದ್ದರು.