ಬೆಳ್ಳಂ ಬೆಳಗ್ಗೆ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆಯನ್ನು ನೋಡೊಕೆ ಬಂದ ಭಯಾನಕ ಅತಿಥಿ ಯಾರು ಗೊತ್ತಾ…? ಮುಂದೆನಾಯ್ತು ಅಂತೀರಾ…?
ದಾವಣಗೆರೆ: ದಾವಣಗೆರೆ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣಕ್ಕೆ ಇಂದು ಮುಂಜಾನೆ
ಓರ್ವ ಭಯಾನಕ ಅತಿಥಿಯೊಬ್ಬರು ಆಗಮಿಸಿದ್ದರು. ಅವ್ರನ್ನ ನೋಡ್ತಿದ್ದಂತೆ ಸಿಬ್ಬಂದಿಯ ಮೈ ಒಂದು ಕ್ಷಣ ಜುಮ್ ಎಂದಿತ್ತು, ಯಾರು ಅಂತೀರಾ ಆ ಅತಿಥಿ..?
ಹೌದು ಅದುವೇ ನಮ್ಮೆಲ್ಲರ ಪ್ರಿತೀಯ ನಾಗರಾಜ. ಸುಮಾರು 10 ಅಡಿಗಿಂತ ಹೆಚ್ಚು ಉದ್ದದ ನಾಗರಹಾವು
ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಬೆಳ್ಳಂಬೆಳಿಗ್ಗೆ ಪ್ರತ್ಯಕ್ಷವಾಗಿತ್ತು. ಸಿಬ್ಬಂದಿಗಳಿಗೆ ಕ್ಷಣಕಾಲ ಹೆದರಿದ ಘಟನೆ ನಡೆದಿತ್ತು. ಸಿಜೆ ಆಸ್ಪತ್ರೆಯ ಆವರಣದಲ್ಲಿರುವ ಬಯೋ ಮೆಡಿಕಲ್ ತ್ಯಾಜ್ಯ ಸಂಗ್ರಹ ಘಟಕದ ಬಳಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ನಾಗರಹಾವು ಕಾಣಿಸಿಕೊಂಡಿದೆ.
ತ್ಯಾಜ್ಯ ವಿಲೇವಾರಿ ಕಾರ್ಯ ಕೈಗೊಂಡ ಸಂದರ್ಬದಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನಾಗರಹಾವು ಕಾಣಿಸಿಕೊಂಡಿತ್ತು. ಕೂಡಲೇ ಹಾವು ಹಿಡಿಯುವ ಯಲ್ಲಪ್ಪ
ಅವರಿಗೆ ವಿಷಯ ತಿಳಿಸಲಾಯಿತು. ತಕ್ಷಣ ಸ್ಥಳಕ್ಕೆ
ಆಗಮಿಸಿದ ಯಲ್ಲಪ್ಪ ನಾಗರ ಹಾವು ಹಿಡಿದು ಡಬ್ಬಿಯಲ್ಲಿ ಹಾವನ್ನು ಸೇರಿಸಲು ಕಷ್ಟಪಡಬೇಕಾಯಿತು.
ಅಂತಿಮವಾಗಿ ಓರ್ವ ಯುವಕನ ಸಹಾಯದಿಂದ ಹಾವನ್ನು ಹಿಡಿಯುವ ಮೂಲಕ ಆಸ್ಪತ್ರೆಯ ಸಿಬ್ಬಂದಿಯ ಆತಂಕ ನಿವಾರಣೆ ಮಾಡಿದರು. ನಾಗರಹಾವನ್ನ ಕೊಂಡಜ್ಜಿಯ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರುವುದಾಗಿ ಯಲ್ಲಪ್ಪ ತಿಳಿಸಿದ್ರು.