ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಹಿರೇಮಠ ಅಧಿಕಾರ ಸ್ವೀಕಾರ: ಪ್ರಾಂಶುಪಾಲರ ಮಾಹಿತಿ ಹೀಗಿದೆ 👇 ನೋಡಿ

IMG-20210819-WA0031

 

ದಾವಣಗೆರೆ: ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ರಾಗಿ ಡಾ.ಗಂಗಾಧರಯ್ಯ ಹಿರೇಮಠ ಅಧಿಕಾರ ವಹಿಸಿಕೊಂಡಿದ್ದಾರೆ.ಕಾಲೇಜಿನಪ್ರಾಧ್ಯಾಪಕರ ಸೇವಾ ಜೇಷ್ಠತೆಯಲ್ಲಿ ಹಿರಿಯರಾದ ಇವರು ಸುಮಾರು 28 ಪುಸ್ತಕಗಳನ್ನು ರಚಿಸಿದ್ದಾರೆ.ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದು ಜನಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಇವರು ಕರ್ನಾಟಕ ಸರ್ಕಾರದ ಸಂಸದೀಯ ಪಟುಗಳು ಬದುಕು ಬರಹ ಮಾಲಿಕೆಯಲ್ಲಿ ನಾಲ್ಕು ಕೃತಿ ರಚಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರದಿಂದ ಮಾನ್ಯ ರಾಜ್ಯಪಾಲರಿಂದ ಹಾಗೂ ಮಾನ್ಯ ಮುಖ್ಯಮಂತ್ರಿ ಗಳಿಂದ ನಾಲ್ಕು ಬಾರಿ ಗೌರವ ಸನ್ಮಾನ ಹಾಗೂ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಕಳೆದ 25 ವರ್ಷಗಳಿಂದ ವಿವಿಧ ವಿಷಯಗಳ ಕುರಿತು ಸಾರ್ವಜನಿಕ ಸಮಾರಂಭದಲ್ಲಿ,ವಿಚಾರ ಸಂಕಿರಣದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸುಮಾರು 250ಕ್ಷೂ ಹೆಚ್ಚು ಉಪನ್ಯಾಸಗಳನ್ನು ನೀಡಿದ ಕೀರ್ತಿ ಇವರದು.
ಪ್ರತಿಷ್ಠಿತ ಜರ್ನಲ್ ಗಳು,ಅಭಿನಂದನಾ ಗ್ರಂಥಗಳು, ಮ್ಯಾಗಜಿನ್ ಹಾಗೂ ಪತ್ರಿಕೆಯಲ್ಲಿ 100ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಶಿಕ್ಷಣ ರತ್ನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ(ಗು.ವಿ.ವಿ).ಡಾ.ರಾಧಾಕೃಷ್ಣ ಶಿಕ್ಷಣ ರತ್ನ ಪ್ರಶಸ್ತಿ,ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ..ಹೀಗೆ ಅನೇಕ ಪ್ರಶಸ್ತಿಗಳನ್ನು,ಸನ್ನಾನ ಹಾಗೂ ಅಭಿನಂದನೆಗಳನ್ನು ಪಡೆದ ಡಾ.ಗಂಗಾಧರಯ್ಯ ಹಿರೇಮಠ ಅವರು ಅತ್ಯುತ್ತಮ ಪ್ರಾಧ್ಯಾಪಕರಾಗಿ ವಿಧ್ಯಾರ್ಥಿಗಳ ಮೆಚ್ಚಿಗೆ ಪಡೆದವರಾಗಿದ್ದಾರೆ.

ಅಧ್ಯಯನಶೀಲತೆ,ಉತ್ತಮ ಲೇಖಕರು,ಚಿಂತನಾಶೀಲರಾದ ಇವರು ಈಗ ಪ್ರಾಂಶುಪಾಲರಾಗಿ ಯುವಸಮುದಾಯಕ್ಕೆ ಉತ್ತಮ ಮಾರ್ಗ ದರ್ಶನ ನೀಡಿ ಶಿಕ್ಷಣ ಇಲಾಖೆ ಯಲ್ಲಿ ಇವರ ಸೇವೆ ಸಮಾಜದ ಪ್ರಗತಿಗೆ ಪೂರಕವಾಗಲಿ ಎಂಬುದೇ ನಮ್ಮ ಆಶಯವಾಗಿದೆ.

Leave a Reply

Your email address will not be published. Required fields are marked *

error: Content is protected !!