ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಡಾ.ಸಾಹೀರಾಬಾನು ಫಾರೂಕಿ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕಾರ
ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈವರೆಗೆ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ ಶಂಕರ.ಶೀಲಿ ಅವರು ವಯೋ ಸಹಜ ನಿವೃತ್ತಿಯಾಗಿದ್ದು, ತೆರವಾದ ಸ್ಥಾನಕ್ಕೆ ಡಾ.ಸಾಹೀರಾಬಾನು ಫಾರೂಕಿ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಪ್ರೊ.ಭೀಮಣ್ಣ ಸುಣಗಾರ, ಗಿರಿಸ್ವಾಮಿ, ಗುರುಮೂರ್ತಿ, ಧರ್ಮಾನಾಯ್ಕ, ವೀರೇಶ್, ಡಾ.ತಿಪ್ಪಾರೆಡ್ಡಿ, ಆಂಜಿನಪ್ಪ, ಡಾ.ಮಂಜಣ್ಣ ಎಂ, ಡಾ.ಜಕ್ಕವರ ಮಂಜುನಾಥ, ಡಾ. ಸದಾಶಿವ, ಲಕ್ಷ್ಮಣ್ ಬಿ.ಎಚ್, ಡಾ.ನಾರಾಯಣಸ್ವಾಮಿ, ಡಾ.ತಿರುಮಲ, ಡಾ. ನಾಗರಾಜ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೂತನ ಪ್ರಾಂಶುಪಾಲರಿಗೆ ಅಭಿನಂದನೆ ಸಲ್ಲಿಸಿದರು.