ಮಾಯಕೊಂಡ ಕ್ಷೇತ್ರದ ಮನೆ-ಮನೆಗೆ ಪ್ರಚಾರ ಕೈಗೊಳ್ಳುತ್ತಿರುವ ಸವಿತಾಬಾಯಿ
ಮಾಯಕೊಂಡ : ಮಾಯಕೊಂಡದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಮಲ್ಲೇಶ್ ನಾಯ್ಕ್ ಈಗ ಮನೆ-ಮನೆಗೆ ನಿಮ್ಮ ಮನೆಮಗಳು ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಂಡಿದ್ದರು. ಮಾಯಕೊಂಡ ಕ್ಷೇತ್ರದ ಕಂಸಾಗರ , ಪುಣ್ಯಸ್ಥಳ, ಹೊಸಳ್ಳಿ , ಚಿಕ್ಕ ಕುರುಬರಹಳ್ಳಿ ಹಾಗೂ ರೆಡ್ಡಿ ಹಳ್ಳಿಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಸಾಧನೆಗಳ ಬಗ್ಗೆ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯರು ಮುಖಂಡರು ಹಾಗೂ ಕಾಂಗ್ರೆಸ್ ನ ಕಾರ್ಯಕರ್ತರು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಇದ್ದರು. ಅಲ್ಲದೇ ನಾನಾ ಊರಿನಲ್ಲಿರುವ ಮಹಿಳೆಯರನ್ನು ಭೇಟಿ ಮಾಡಿ ಪಕ್ಷದ ಸಂಘಟನೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಕಾಂಗ್ರೆಸ್ ಪರ ಮಾತುಕತೆ ನಡೆಸಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವಂತೆ ಮನವಿ ಮಾಡಿದರು.
ಮಾಯಕೊಂಡದ ನಾನಾ ಹಳ್ಳಿಗಳಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಮಲ್ಲೇಶ್ ನಾಯ್ಕ್ ‘ಮನೆ-ಮನೆಗೆ ನಿಮ್ಮ ಮನೆಮಗಳು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಾಧನೆಗಳನ್ನು ಕರ ಪತ್ರದ ಮೂಲಕ ತಿಳಿಸಿದರು.