ದ್ವಿತೀಯ ಪಿಯು ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಜೆಇಇ ಪರೀಕ್ಷಾ ಕಾರಣದಿಂದ ದ್ವಿತೀಯ ಪಿಯು ಪರೀಕ್ಷೆಯ ವೇಳಾಪಟ್ಟಿ ಪರಿಷ್ಕರಣೆಗೊಂಡಿದ್ದು, ಈಗ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ. ದ್ವಿತೀಯ ಪಿಯು ಪರೀಕ್ಷೆಯನ್ನು ಏಪ್ರಿಲ್ 22ರಿಂದ ಮೇ 18ರವರೆಗೆ ನಡೆಯಲಿವೆ. ಕಾಮನ್ ಲಾ ಅಡ್ಮಿಷನ್ ಟೆಸ್ಟ್ (ಸಿಎಲ್‌ಎಟಿ), ಎಐಎಂಎ ಯುಜಿಎಟಿ ಪರೀಕ್ಷೆ ಹಾಗೂ ನವೋದಯ ವಿದ್ಯಾಲಯ ಪರೀಕ್ಷೆ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯು ಅಂತಿಮ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೆಶಕರು ತಿಳಿಸಿದ್ದಾರೆ.
ದ್ವಿತೀಯ ಪಿಯು ಅಂತಿಮ ವೇಳಾಪಟ್ಟಿ :
ಏಪ್ರಿಲ್ 22, 2022 : ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏಪ್ರಿಲ್ 23, 2022: ಗಣಿತ, ಶಿಕ್ಷಣ,
ಏಪ್ರಿಲ್ 25, 2022: ಅರ್ಥಶಾಸ್ತ್ರ,
ಏಪ್ರಿಲ್ 26, 2022: ಹಿಂದೂಸ್ತಾನಿ ಸಂಗೀತ, ಸೈಕಾಲಜಿ, ರಸಾಯನಶಾಸ್ತ್ರ, ಮೂಲ ಗಣಿತ,
ಏಪ್ರಿಲ್ 27, 2022: ತಮಿಳು, ಮರಾಠಿ, ತೆಲಗು, ಮಲಯಾಳಮ್, ಉರ್ದು, ಸಂಸ್ಕೃತ, ಫ್ರೆಂಚ್
ಏಪ್ರಿಲ್ 28, 2022: ಕನ್ನಡ, ಅರೇಬಿಕ್
ಮೇ 02, 2022: ಭೂಗೋಳಶಾಸ್ತ್ರ, ಜೀವಶಾಸ್ತ್ರ,
ಮೇ 04, 2022: ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್‌ನೆಸ್
ಮೇ 05, 2022: ಇಂಗ್ಲಿಷ್
ಮೇ 10, 2022: ಇತಿಹಾಸ, ಭೌತಶಾಸ್ತ್ರ,
ಮೇ 12, 2022: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ,

ಮೇ 14, 2022:  ಸಮಾಜಶಾಸ್ತ್ರ,  ವಿದ್ಯುನ್ಮಾನಶಾಸ್ತ್ರ, ಕಂಪ್ಯೂಟರ್
ಮೇ 17, 2022: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ಮೇ 18, 2022: ಹಿಂದಿ

 

 

 

Leave a Reply

Your email address will not be published. Required fields are marked *

error: Content is protected !!