ಸೆ. 17 ರಂದು ಬೃಹತ್ ಲಸಿಕಾ ಮೇಳ: ಪಾಲಿಕೆಯ ಎಲ್ಲ ವಾರ್ಡ್ಗಳಲ್ಲಿ ಕೋವಿಶೀಲ್ಡ್ ಲಸಿಕೆ

ದಾವಣಗೆರೆ: ತಾಲ್ಲೂಕಿನಲ್ಲಿ ಸೆ. 17 ರಂದು ಬೃಹತ್ ಲಸಿಕಾ ಮೇಳ ಆಯೋಜಿಸಲಾಗಿದ್ದು, ಮಹಾನಗರಪಾಲಿಕೆಯ ಎಲ್ಲಾ ವಾರ್ಡ್ಗಳಲ್ಲಿಯೂ ತಲಾ 500 ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ನಿಗದಿತ ಸ್ಥಳಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5:30 ರವರೆಗೆ ನೀಡಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
ಡಾ. ಅಂಬೇಡ್ಕರ್ ಸಮುದಾಯ ಭವನ, ಗಾಂಧಿನಗರ, ಅಲಿ-ಇಖ್ರಾ ಶಾಲೆ, ಎಸ್‌ಎಸ್‌ಎಂ ನಗರ, ಸರ್ಕಾರಿ ಹಿ.ಪ್ರಾ.ಶಾಲೆ, ಬೀಡಿ ಲೇಔಟ್, ಮಿಲ್ಲತ್ ಎಜುಕೇಷನ್ ಟ್ರಸ್ಟ್ ಬಾಷಾ ನಗರ, ಸರ್ಕಾರಿ ಹಿ,ಪ್ರಾ.ಶಾಲೆ ಎಸ್‌ಪಿಎಸ್ 2ನೇ ಹಂತ, ಆಂಜನೇಯ ದೇವಸ್ಥಾನ ಅಂಗನವಾಡಿ ಕೇಂದ್ರ, ವಿಜಯನಗರ, ಚಿರಡೋಣಿ ಕಮಲಮ್ಮ ಸರ್ಕಾರಿ ಹಿ.ಪ್ರಾ.ಶಾಲೆ ಬಿ-ಬ್ಲಾಕ್, ದೇವರಾಜ ಅರಸ್ ಬಡಾವಣೆ, ಮುರುಘರಾಜೇಂದ್ರ ಪ್ರೌಢಶಾಲೆ ವಿನಾಯಕ ಬಡಾವಣೆ, ಅಂಗನವಾಡಿ ಕೇಂದ್ರ 6ನೇ ಕ್ರಾಸ್, ಆಜಾದ್‌ನಗರ, ಚನ್ನಗಿರಿ ವಿರುಪಾಕ್ಷಪ್ಪ ವನಜಾಕ್ಷಮ್ಮ ಹಿ.ಪ್ರಾ.ಶಾಲೆ ಎಸ್‌ಕೆಪಿ ರಸ್ತೆ. ವಾರ್ಡ್ ಸಂ. 11 ರ ಸದಸ್ಯರ ಜನಸಂಪರ್ಕ ಕಚೇರಿ, ಮಾಗನಹಳ್ಳಿ ಉರ್ದು ಶಾಲೆ ಅಹ್ಮದ್‌ನಗರ, ಶ್ರೀಕಂಠೆಮ್ಮ ದೇವಸ್ಥಾನ, ಬೇತೂರ ರಸ್ತೆ, ಬೋವಿ ಕಾಲೋನಿ, ಅಂಗನವಾಡಿ ಕೇಂದ್ರ ವಿಠಲ ದೇವಸ್ಥಾನ ಹಿಂಭಾಗ, ಗರಡಿಮನೆ ಹತ್ತಿರ. ಯಲ್ಲಮ್ಮ ದೇವಿ ಶಾಲೆ ಯಲ್ಲಮ್ಮ ನಗರ, ಕಣದ ಏರಿಯಾ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ವಿನೋಬನಗರ, ರಾಮ ದೇವಸ್ಥಾನ, 2ನೇ ಕ್ರಾಸ್, ಪಿಜೆ ಬಡಾವಣೆ, ಜೀ ಜೀ ಮಾತಾ ಸರ್ಕಾರಿ ಹಿ.ಪ್ರಾ.ಶಾಲೆ, ಸರ್ಕಾರಿ ಹಿ.ಪ್ರಾ.ಶಾಲೆ ಗಡಿಯಾರ ಕಂಬ, ಸರ್ಕಾರಿ ಹಿ.ಪ್ರಾ.ಶಾಲೆ ಭಾರತ್ ಕಾಲೋನಿ. ಸರ್ಕಾರಿ ಹಿ.ಪ್ರಾ.ಶಾಲೆ ಬಸಾಪುರ. ಸಿದ್ದಿ ವಿನಾಯಕ ಶಾಲೆ, ಯಲ್ಲಮ್ಮ ನಗರ. ಬಕ್ಕೇಶ್ವರ ಪ್ರೌಢಶಾಲೆ, ಎಂಸಿಸಿ ಎ-ಬ್ಲಾಕ್. ಮೋತಿ ವೀರಪ್ಪ ಶಾಲೆ, ಗುಂಡಿ ಸರ್ಕಲ್, ಎನ್‌ಕೆ ಕಾಂಪ್ಲೆಕ್ಸ್, ಅಂಗನವಾಡಿ ಕೇಂದ್ರ, 4ನೇ ಕ್ರಾಸ್. ಕೆಟಿಜೆ ನಗರ 14ನೇ ಕ್ರಾಸ್, ವಾಚನಾಲಯ, ಸರ್ಕಾರಿ ಹಿ.ಪ್ರಾ.ಶಾಲೆ, ಲೇಬರ್ ಕಾಲೋನಿ, ಭಗತ್‌ಸಿಂಗ್ ನಗರ, ಸರ್ಕಾರಿ ಹಿ.ಪ್ರಾ.ಶಾಲೆ ಶ್ರೀರಾಮ್ ಬಡಾವಣೆ. ಸರ್ಕಾರಿ ಹಿ.ಪ್ರಾ.ಶಾಲೆ ವಾಟರ್ ಟ್ಯಾಂಕ್ ಎದುರು, ಆವರಗೆರೆ, ಸರ್ಕಾರಿ ಹಿ.ಪ್ರಾ.ಶಾಲೆ ಎಸ್‌ಒಜಿ ಕಾಲೋನಿ, ನವತರಂಗ ಸ.ಹಿ.ಪ್ರಾ.ಶಾಲೆ, ಚಿಕ್ಕನಹಳ್ಳಿ, ಕೆಎಸ್‌ಎಸ್ ಕಾಲೇಜು, ಸರಸ್ವತಿ ನಗರ, ದುರ್ಗಾಂಬಿಕಾ ಪ್ರೌಢಶಾಲೆ ಶಿವಕುಮಾರಸ್ವಾಮಿ ಬಡಾವಣೆ, ಈಶ್ವರ ದೇವಸ್ಥಾನ ನಿಟುವಳ್ಳಿ, ವಾರ್ಡ್ ಸದಸ್ಯರ ಕಚೇರಿ 60 ಅಡಿ ರಸ್ತೆ, ನಿಟುವಳ್ಳಿ, ಸ.ಹಿ.ಪ್ರಾ.ಶಾಲೆ, ಡಾಂಗೆ ಪಾರ್ಕ್. ಕೆಟಿಜೆ ನಗರ, ಸ್ವಿಮ್ಮಿಂಗ್ ಪೂಲ್ ಬಳಿ, 6ನೇ ಮುಖ್ಯ ರಸ್ತೆ, ಎಂಸಿಸಿ ಬಿ-ಬ್ಲಾಕ್, ಶಿವಪಾರ್ವತಿ ದೇವಸ್ಥಾನ ವಿದ್ಯಾನಗರ, ವಾಟರ್ ಟ್ಯಾಂಕ್ ಪಾರ್ಕ್, ಆಂಜನೇಯ ಬಡಾವಣೆ, ಸ.ಹಿ.ಪ್ರಾ.ಶಾಲೆ, ಶ್ರೀರಾಮನಗರ, ಆಂಜನೇಯ ಕಲ್ಯಾಣ ಮಂಟಪ, ಶಾಮನೂರು, ಎಬಿಸಿಡಿ ಡ್ಯಾನ್ ಕ್ಲಾಸ್, ಚಿಂದೋಡಿ ಲೀಲಾ ಕಲಾ ಕ್ಷೇತ್ರ, ಕುವೆಂಪು ನಗರಣ ಸರ್ಕಾರಿ ಪ್ರಾ.ಶಾಲೆ, ಹಳೇ ಕುಂದವಾಡ. ಓಲೇರಮ್ಮ ದೇವಸ್ಥಾನ, ರಿಂಗ್ ರಸ್ತೆ ಹತ್ತಿರ, ಎಸ್‌ಜೆಎಂ ನಗರ. ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್ಗಳಲ್ಲಿ ತಲಾ 500 ಡೋಸ್ ಲಸಿಕೆಯನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
18 ವರ್ಷ ಮೇಲ್ಪಟ್ಟವರು ಮೊದಲನೆ ಡೋಸ್ ಹಾಗೂ ಈಗಾಗಲೆ ಮೊದಲ ಡೋಸ್ ಪಡೆದು ನಿಗದಿತ ಅವಧಿ ಪೂರ್ಣಗೊಂಡವರು ಎರಡನೆ ಡೋಸ್ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.