ಸೆಪ್ಟೆಂಬರ್ 27 ರಂದು ಭಾರತ್ ಬಂದ್ ಬೆಂಬಲಿಸಿ ಕರ್ನಾಟಕ ಬಂದ್
ದಾವಣಗೆರೆ : ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರಾಷ್ಟ್ರೀಯ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ( ಎಸ್ಕೆಎಂ ) ಸೆ .27 ರಂದು ಭಾರತ ಬಂದ್ಗೆ ಕರೆ ನೀಡಿದೆ . ಬಂದ್ ಗೆ ರೈತ ಪರ ಮತ್ತು ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು .
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ,
ಕೇಂದ್ರದ ಕೃಷಿಗೆ ಸಬಂಧಿಸಿದಂತ ಮೂರು ಕಾಯ್ದೆ ವಾಪಸ್ ಪಡೆಯಬೇಕು . ಅಗತ್ಯ ವಸ್ತು ಬೆಲೆ ಮತ್ತು ಪೆಟ್ರೋಲ್ , ಡೀಸಲ್ ಬೆಲೆ ನಿಯಂತ್ರಣಕ್ಕೆ ತರಬೇಕೆಂದು ದೇಶದಾದ್ಯಂತ ಬಂದ್ ಗೆ ಕರೆ ನೀಡಲಾಗಿದೆ ಅದೇ ರೀತಿ ಕರ್ನಾಟಕದ ಹಳ್ಳಿಗಳಲ್ಲಿ ರೈತರು ಗ್ರಾಮಾಂತರ ರಸ್ತೆಗಳು ರಾಜ್ಯ ಹೆದ್ದಾರಿಗಳು ಬಂದ್ ಮಾಡಿ ಪ್ರತಿಭಟನೆ ಮಾಡಲಿದ್ದಾರೆ . ರಾಜ್ಯದಲ್ಲಿ ಎಲ್ಲ ಸಂಘನೆಗಳು ಪ್ರತಿಭಟನೆಗೆ ಬೆಂಬಲ ನೀಡಿವೆ ಎಂದರು.
ದೇಶದಾದ್ಯಂತ ಪ್ರಮುಖ 500 ಕ್ಕೂ ಹೆಚ್ಚು ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ . ರೈತರ ಉತ್ಪಾದನೆ , ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ , ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ ( ಸಬಲೀಕರಣ ಮತ್ತು ಸಂರಕ್ಷಣೆ ಒಪ್ಪಂದ ) ಮತ್ತು ಅಗತ್ಯ ಸರಕುಗಳ ಕಾಯ್ದೆಯ ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು . ಈ ಸಂದರ್ಭದಲ್ಲಿ ರೈತಮುಖಂಡ ತೇಜಸ್ವಿ ಪಟೇಲ್ ಮಾತನಾಡಿ ದೇಶದ ಪ್ರಧಾನಿಗಳು ಪಕ್ಕದ ದೇಶಗಳಿಗೆ ಹೋಗಲು ಅವರ ಬಗ್ಗೆ ಸಮಯವಿದು ರೈತರನ್ನು ಕರೆದು ಮಾತನಾಡಲು ಅವರಿಗೆ ಸಮಯ ವಿಲ್ಲ ಇದು ವಿಷಾದನೀಯ ಎಂದರು