ಸೆಪ್ಟೆಂಬರ್ 27 ಭಾರತ್ ಬಂದ್ ಗಾಗಿ ಜನಜಾಗೃತಿ ಪ್ರಚಾರಾಂದೋಲನ
ದಾವಣಗೆರೆ: ಕೇಂದ್ರ ಸರ್ಕಾರವು ಜಾರಿಗೆ ತಂದಿರುವ 3 ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ರೈತ ಸಂಘಟನೆಗಳ ಒಕ್ಕೂಟ ಇದೇ ಸೆಪ್ಟಂಬರ್ 27ರಂದು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ರೈತ ಕಾರ್ಮಿಕ ಸಂಘಟನೆಗಳು ನಗರದಲ್ಲಿಂದು ಪ್ರಚಾರಾಂದೋಲನ ನಡೆಸಿದರು
ನಗರದ ಜಯದೇವವೃತ್ತದಲ್ಲಿ ಪ್ರಚಾರಾಂದೋಲನ ಆರಂಭಿಸಿದ ರೈತ ಮತ್ತು ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು.
ಭಾರತ್ ಬಂದ್ ಗೆ ನಾಗರಿಕರು ವರ್ತಕರು ಆಟೋ ಚಾಲಕರು ಬಸ್ ಮಾಲೀಕರು ಸಣ್ಣಪುಟ್ಟ ದಿನಿಸಿ ವ್ಯಾಪಾರಿಗಳು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಪ್ರಚಾರಾಂದೋಲನ ಉದ್ಘಾಟಿಸಿ ಮಾತನಾಡಿದ ರೈತ ಮುಖಂಡ ತೇಜಸ್ವಿ ಪಾಟೀಲ್ ಕೇಂದ್ರ ಸರ್ಕಾರವು ಕಾರ್ಪೊರೇಟ್ ಪರವಾಗಿ ಮೂರು ಕೃಷಿ ಕಾಯ್ದೆಗಳನ್ನು ಹಾಗೂ ವಿದ್ಯುತ್ ಮಸೂದೆಗಳನ್ನು ಜಾರಿಗೆ ತಂದು ದೇಶದ ಕೃಷಿಯನ್ನು ಬಂಡವಾಳಶಾಹಿ ಕಂಪನಿಗಳಿಗೆ ಬಯಸುವ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂರು ಕಾಯ್ದೆಗಳನ್ನು ಹಾಗೂ ವಿದ್ಯುತ್ ಮಸೂದೆಯನ್ನು ರದ್ದುಪಡಿಸಬೇಕು ರೈತರ ಉತ್ಪನ್ನಗಳಿಗೆ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾನೂನುಬದ್ಧಗೊಳಿಸಬೇಕು ಎಂದು ಒತ್ತಾಯಿಸಿದರು.
ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಅವರಗೆರೆ ಚಂದ್ರು ಮಾತನಾಡಿ
ಈ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಹೋರಾಟದಲ್ಲಿ 600ಕ್ಕೂ ಹೆಚ್ಚು ರೈತರು ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ ಇದೀಗ ಹೋರಾಟಕ್ಕೆ ಒಂದು ವರ್ಷಕ್ಕೆ ಆಗುತ್ತಿದ್ದು ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದೇ ನಿರ್ಲಕ್ಷಿಸುತ್ತಿದೆ ಎಂದರು.
ಈ ಬಗ್ಗೆ ಸಾರ್ವಜನಿಕರು ನಾಗರಿಕರು ವಿದ್ಯಾರ್ಥಿಗಳು ಯುವಜನರು ವರ್ತಕರು ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಪ್ರಚಾರದಲ್ಲಿ ಹಲವಾರು ಸಂಘಟನೆಗಳ ಮುಖಂಡರಾದ ಅವರಗೆರೆ ಉಮೇಶ್ ಬಲ್ಲೂರ ರವಿಕುಮಾರ್ ಮಲ್ಲ ಶೆಟ್ಟಳ್ಳಿ ಚನಬಸಪ್ಪ. ಮಧು ತೊಗಲೇರಿ. ಮಂಜುನಾಥ್ ಕುಕ್ಕುವಾಡ. ಭಾರತಿ ನಾಗಜ್ಯೋತಿ ಐರಣಿ ಚಂದ್ರು ಮುಂತಾದವರು ಭಾಗವಹಿಸಿದ್ದರು