ಸೆಪ್ಟೆಂಬರ್ 30 ರಂದು ಲಿಂಗೈಕ್ಯ ಮಹಾಂತ ಮಹಾಸ್ವಾಮಿಗಳ ಜಯಂತೋತ್ಸವ ಹಾಗೂ 2ಎ ಮೀಸಲಾತಿಗಾಗಿ ಬೃಹತ್ ಕಾರ್ಯಕ್ರಮ

ದಾವಣಗೆರೆ: ಇದೇ 30ರಂದು ದಾವಣಗೆರೆಯಲ್ಲಿ ಲಿಂಗಾಯತ ಪಂಚಮಸಾಲಿ ಜಗದ್ಗುರು 2008 ಲಿಂಗೈಕ್ಯ ಪೂಜ್ಯ ಶ್ರೀ ಶ್ರೀ ಶ್ರೀ ಡಾ : ಮಹಾಂತ ಸ್ವಾಮಿಗಳವರ ಜಯಂತೋತ್ಸವ ಹಾಗೂ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಶ್ರೀ ಬಿ ಜೆ ಅಜಯ್ ಕುಮಾರ್ ಪದಗ್ರಹಣ ಹಾಗೂ 2ಎ ಮೀಸಲಾತಿ ಆಗ್ರಹಿಸಿ ಬೃಹತ್ ಕಾರ್ಯಕ್ರಮವನ್ನು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ವತಿಯಿಂದ ತ್ರಿಶೂಲ್ ಕಲಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎಚ್ಎಸ್ ಶಿವಶಂಕರ್ ಹೇಳಿದರು
ಅಂದು ಮಧ್ಯಾಹ್ನ ಮೂರಕ್ಕೆ ಪಂಚಮಸಾಲಿ ಪೀಠದ ಮೊದಲ ಜಗದ್ಗುರುಗಳಾದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿಯವರನ್ನು ಸಂಗೊಳ್ಳಿ ರಾಯಣ್ಣ ವೃತ್ತದಿಂದ 5000ಕ್ಕೂ ಹೆಚ್ಚು ಬೈಕ್ ರಾಲಿ ಮುಖಾಂತರ ಸ್ವಾಗತಿಸಿಕೊಂಡು ನಂತರ ಗಾಂಧಿ ವೃತ್ತದ ಬಳಿ ಮೂರು ಆನೆ ಗಳಿಂದ( ಶ್ರೀಶೈಲ ಮಠದ ಆನೆ, ಹೊನ್ನಾಳಿ ಹಿರೇಕಲ್ಮಠದ ಆನೆ, ಹಾಗೂ ಐರಣಿ ಹೊಳೆಮಠದ ಆನೆ ) ಹಾಗೂ ವಾದ್ಯಮೇಳಗಳೊಂದಿಗೆ ಮೆರವಣಿಗೆ ಮುಖಾಂತರ ಸ್ವಾಗತಿಲಾಗುವುದು
ನಂತರ ಸಂಜೆ 5 ಗಂಟೆಗೆ ತ್ರಿಶೂಲ್ ಕಲಾ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ 50 ಸಾವಿರ ಜನ ಸೇರುವ ನಿರೀಕ್ಷೆ ಇದ್ದು ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಸೇರಿದಂತೆ ಸಮಾಜದ ಜನಪ್ರತಿನಿಧಿಗಳು ಗಣ್ಯರು ಆಗಮಿಸಲಿದ್ದಾರೆ.
ಸರ್ಕಾರ 2 ಎ ಮೀಸಲಾತಿ ನೀಡುವ ಭರವಸೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಗೋಪನಾಳ್ ಅಶೋಕ್, ಮೋತಿ ಟಿ ಶಂಕ್ರಪ್ಪ, ಪ್ರಭು ಕಲ್ಬುರ್ಗಿ ಮಾಂತೇಶ್ ಒಣ ರೊಟ್ಟಿ ಮಂಜಪ್ಪ ಹರಿಹರ ಮುರುಗೇಶ್ ಜಯಪ್ರಕಾಶ್ ಓಂಕಾರಪ್ಪ ಮತಿ ಶ್ರೀಧರ್ ಇದ್ದರು

 
                         
                       
                       
                       
                       
                       
                       
                      