ನೋಟರಿ ಕಾಯ್ದೆ-೨೦೨೧ ತಿದ್ದುಪಡಿ ವಿರೋಧಿಸಿ ಜಿಲ್ಲೆಯಾದ್ಯಂತ ಡಿ.14 ರಂದು ಸೇವೆ ಸ್ಥಗಿತ
ದಾವಣಗೆರೆ: ಜಿಲ್ಲಾ ನೋಟರಿ ಸಂಘವು ನೋಟರಿ ಕಾಯ್ದೆ-೨೦೨೧ ತಿದ್ದುಪಡಿ ವಿರೋಧಿಸಿ ಜಿಲ್ಲೆಯಾದ್ಯಂತ ಡಿ.14 ರಂದು ಸೇವೆ ಸ್ಥಗಿತಗೊಳಿಸಿ, ತಿದ್ದುಪಡಿ ಹಿಂಪಡೆಯುವಂತೆ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ ಎಂದು ಸಂಘದ ಕಾರ್ಯದರ್ಶಿ ತ್ಯಾವಣಿಗೆ ಮಲ್ಲಿಕಾರ್ಜುನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಡಿ.೧೪ರ ಇಂದು ೧೧ ಗಂಟೆಗೆ ಎಲ್ಲಾ ನೋಟರಿಗಳು ನೋಟರಿ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ, ಕೆಲಸ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ನೋಟರಿಗಳಾಗಿ ನಾವು ಕಳೆದ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದು, ಈ ತಿದ್ದುಪಡಿ ಜಾರಿಯಾದರೆ ನಮಗೆ ನೋಟರಿಯಾಗಿ ಮುಂದುವರೆಯಲು ಅವಕಾಶ ಸಿಗುವುದಿಲ್ಲ. ವಕೀಲ ವೃತ್ತಿಯಿಂದಲೂ ಹೊರಗುಳಿದಿರುವ ನಮಗೆ ಜೀವನ ನಡೆಸುವುದೇ ಕಷ್ಟಕರವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೂಡಲೇ ತಿದ್ದುಪಡಿ ತೀರ್ಮಾನವನ್ನು ಸರಕಾರ ಕೈಬಿಡಬೇಕೆಂದು ಒತ್ತಾಯಿಸಿದರು.
ರೇವಣಸಿದ್ದಪ್ಪ, ಪ್ರತಾಪರುದ್ರ, ಸಾಯೀಶ್, ಕೆ. ಈಶ್ವರ್, ನೀಲಕಂಠ ಸ್ವಾಮಿ ಗೋಷ್ಠಿಯಲ್ಲಿದ್ದರು.