ಮಲೇಬೆನ್ನೂರಿನ ರಾಜ ರಾಜೇಶ್ವರಿ ವಿದ್ಯಾಸಂಸ್ಥೆಯ ಪ್ರಿಯದರ್ಶಿನಿಗೆ ಶೇ. 92 ಫಲಿತಾಂಶ

ದಾವಣಗೆರೆ: ಮಲೇಬೆನ್ನೂರು ಪಟ್ಟಣದ ಜಿಗಳಿ ರಸ್ತೆಯಲ್ಲಿರುವ ಒಡೆಯರ ಬಸವಾಪುರದ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆ ಗೆ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಗುಣಮಟ್ಟದ ಫಲಿತಾಂಶ ದೊರಕಿದೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ಸಹ ಶಾಲೆಗೆ ಗುಣಮಟ್ಟದ ಫಲಿತಾಂಶ ತಂದುಕೊಟ್ಟಿದ್ದಾರೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ಶ್ರೀಮತಿ ಸುಜಾತ ಜಿ ಓ ತಿಳಿಸಿದ್ದಾರೆ.

ಪರೀಕ್ಷೆಗೆ ಕುಳಿತ 21 ವಿದ್ಯಾರ್ಥಿಗಳಲ್ಲಿ 5 ಡಿಸ್ಟಿಂಕ್ಷನ್ ಹಾಗೂ 11 ಪ್ರಥಮ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.

575 ಅಂಕಗಳೊಂದಿಗೆ ಶೇ. 92 ಫಲಿತಾಂಶ ಪಡೆದಿರುವ ಪ್ರಿಯದರ್ಶಿನಿ ಸಿ ಎಂಬ ವಿದ್ಯಾರ್ಥಿನಿ ಶಾಲೆಯ ಟಾಪರ್ ಆಗಿದ್ದಾಳೆ. ಉಳಿದಂತೆ ತೇಜಸ್ವಿನಿ ಎಂ ಎಂ – ಶೇ. 91.36, ಕೃಪಾ ಪಾಟೀಲ್ – ಶೇ 91.04, ರುಮಾನಾ ಫರ್ಜಿನ್ – ಶೇ. 86.08, ಸುನಿಧಿ ಏ. ಆರ್ ಶೇ. 82 ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ಸಮಾಜ ವಿಜ್ಞಾನ ವಿಷಯದಲ್ಲಿ ಕೃಪಾ ಪಾಟೀಲ್ 100 ಕ್ಕೆ 100, ಕನ್ನಡದಲ್ಲಿ 125 ಕ್ಕೆ ತೇಜಸ್ವಿನಿ ಎಂ ಎಂ 124, ಕೃಪಾ ಪಾಟೀಲ್ ಮತ್ತು ಸುನಿಧಿ ಏ. ಆರ್ ತಲಾ 122 ಹಾಗೂ ಪ್ರಿಯದರ್ಶಿನಿ 120 ಅಂಕ ಪಡೆದಿದ್ದಾರೆ.

ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿರುವ ಸಂಸ್ಥೆಯ ಕಾರ್ಯದರ್ಶಿ ಶಿವಾನಂದಪ್ಪ ಬಿ ಜಿ , ಮುಖ್ಯೋಪಾಧ್ಯಾಯ ಶಶಿಧರ್ ಎಸ್ , ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಪೋಷಕರು ಎಲ್ಲಾ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!