ಎಸ್ ಎಸ್ ಕುಟುಂಬದಿಂದ ಮುಂದುವರೆದ ಉಚಿತ ಲಸಿಕಾ ಶಿಬಿರ, ಎರಡನೇ ದಿನ 300 ಕ್ಕೂ ಹೆಚ್ಚು ನಾಗರೀಕರಿಗೆ ಲಸಿಕೆ

ದಾವಣಗೆರೆ: ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ದಾವಣಗೆರೆ ನಾಗರೀಕರಿಗಾಗಿ ಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರ ಕಾರ್ಯಕ್ರಮವೂ ಇಂದು ಮುಂದುವರೆದಿದ್ದು, ಸುಮಾರು 300ಕ್ಕೂ ಹೆಚ್ಚು ನಾಗರೀಕರು ಉಚಿತ ಲಸಿಕೆಯನ್ನು ಪಡೆದರು.

ಇಂದು ದಾವಣಗೆರೆ ನಗರದ ಡಾ|| ಬಾಬು ಜಗಜೀವನರಾಂ ಸಮುದಾಯ ಭವನ, ಶ್ರೀದುರ್ಗಾಂಬಿಕಾ ಶಾಲೆ ಮತ್ತು ಶ್ರೀದುರ್ಗಾಂಬಿಕಾ ದೇವಿ ಭೋಜನಾಲಯದಲ್ಲಿ ವಿವಿಧ ವಾಡ್ ್ಗಳ ನಾಗರೀಕರಿಗೆ ಅನುಕೂಲವಾಗುವಂತೆ ಲಸಿಕೆ ನೀಡಲಾಯಿತು. ವಾರ್ಡ್ ನಂಬರ್ 5,7,8,10,18 ಮತ್ತು 45ನೇ ವಾರ್ಡ್‍ನ 300ಕ್ಕೂ ಹೆಚ್ಚು ನಾಗರೀಕರು ಲಸಿಕೆ ಪಡೆದರು.

ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ಸೂಚನೆ ಮೇರೆಗೆ ದಾವಣಗೆರೆಯ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಿಬ್ಬಂದಿವರ್ಗದವರು ಲಸಿಕಾ ಶಿಬಿರ ನಡೆಸಿಕೊಟ್ಟರು.
ಮೂರು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆದ ನಾಗರೀಕರಿಗೆ ನೀರು ಮತ್ತು ಬಿಸ್ಕತ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ಶ್ರೀಮತಿ ಸುಧಾ ಇಟ್ಟಿಗುಡಿ ಮಂಜುನಾಥ್, ಉದಯ್ ಕುಮಾರ್, ವಿನಾಯಕ ಪೈಲ್ವಾನ್, ಮುಖಂಡರುಗಳಾದ ಮಾಲತೇಶ್ ರಾವ್ ಜಾಧವ್, ಬಸಪ್ಪ, ಉಮೇಶ್ ಸಾಳಂಕಿ, ಬಾಬುರಾವ್ ಸಾಳಂಕಿ, ಪಿ.ಎನ್.ಚಂದ್ರಶೇಖರ್, ಆನಂದ ಇಟ್ಟಿಗುಡಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!