ಶಾಮನೂರು ಸುಶೀಲಮ್ಮ ನಿಧನ| ಜೆ.ಜೆ.ಎಂ.ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ|| ಎಸ್.ಬಿ.ಮುರುಗೇಶಗೆ ಮಾತೃ ವಿಯೋಗ
ದಾವಣಗೆರೆ: ಮಾಜಿ ಸಚಿವರು, ಹಾಲಿ ಶಾಸಕರೂ ಆದ ಡಾ|| ಶಾಮನೂರು ಶಿವಶಂಕರಪ್ಪನವರ ಹಿರಿಯ ಸಹೋದರರಾದ ದಿವಂಗತ ಶಾಮನೂರು ಬಸವರಾಜಪ್ಪನವರ ಧರ್ಮಪತ್ನಿ ಶ್ರೀಮತಿ ಶಾಮನೂರು ಸುಶೀಲಮ್ಮನವರು ಆಗಸ್ಟ್ 31ರ ಮಂಗಳವಾರ ಬೆಳಗಿನ ಜಾವ 6.30ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಪುತ್ರ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ಎಸ್.ಬಿ.ಮುರುಗೇಶ್, ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಶ್ರೀಯುತರ ಅಂತ್ಯಕ್ರಿಯೆಯನ್ನು ಆಗಸ್ಟ್ 31ರ ಮಂಗಳವಾರ ಸಂಜೆ ನಗರದ ಬಂಬೂಬಜಾರ್ ರಸ್ತೆಯ ಕಲ್ಲೇಶ್ವರ ರೈಸ್ಮಿಲ್ನಲ್ಲಿ ನೆರವೇರಿತು.
ಸಂತಾಪ: ಶಾಮನೂರು ಸುಶೀಲಮ್ಮನವರ ನಿಧನಕ್ಕೆ ಚಿತ್ರದುರ್ಗ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷರಾದ ಎಸ್.ಎಸ್.ಬಕ್ಕೇಶ್, ಉದ್ಯಮಿ ಎಸ್.ಎಸ್.ಗಣೇಶ್, ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಬಾಪೂಜಿ ಆಡಳಿತ ಮಂಡಳಿಯವರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.