ಅಪ್ಪುಗೆ ನನ್ನ ಅಶೃತರ್ಪಣೆ – ಶಂಕರ್ ನಿರಾವರಿ ನಿಗಮಗಳ ಸಂಪರ್ಕಾಧಿಕಾರಿ

ಬೆಂಗಳೂರು: ಈ ಶೋಕದ ಸಂದರ್ಭದಲ್ಲಿ ಪ್ರೀತಿಯ ಅಪ್ಪುಗೆ ನನ್ನ ಸ್ಮರಣೆಗಳನ್ನು ಸಲ್ಲಿಸುತ್ತಾ..
ಆಗ 2002ರ ನವೆಂಬರ್ ತಿಂಗಳು. ಅದೊಂದು ಶುಕ್ರವಾರ ; ಬಿ ಎಸ್ಸಿ 2ನೇ ವರ್ಷದಲ್ಲಿ, ಸೇಂಟ್ ಜೋಸೆಫ್ ಕಾಲೇಜಿನಲ್ಲಿ ನಾನು ಓದುತ್ತಿದ್ದ ದಿನಗಳು. ಪ್ರತಿ ದಿನದಂತೆ ಅಂದೂ ನಾನು ನನ್ನ ಕ್ಲಾಸಿಗೆ ಹೋದೆ. ನನ್ನ ತರಗತಿಯಲ್ಲಿ ನನ್ನ ಒಂದು ವರ್ಷ ಸೀನಿಯರ್ ಆಗಿದ್ದ ನಟಿ ರಮ್ಯ (ಮಾಜಿ ಎಂಪಿ) ಮತ್ತು ಪುನೀತ್ ಕೂತಿದ್ದರು. *ಅಭಿ* ಎನ್ನುವ ಕನ್ನಡ ಮೂವೀ ಶೂಟಿಂಗ್. *ಸುಮ್ಮಸುಮ್ಮನೇ ಹೋಳುಬಿಡೋ ಸುಂದರಿ* ಹಾಡಿನ ಇಡೀ ಶೂಟಿಂಗ್ ನನ್ನ ಕ್ಲಾಸ್ ಮತ್ತು ಕಾರಿಡಾರ್ ಲ್ಲೇ ನಡೆದಿದ್ದು.
ನಂತರದಲ್ಲಿ ಸ್ನೇಹಿತ ಕಮ್ ನಟ ಶಿವಧ್ವಜ್ ಶೆಟ್ಟಿ ಜೊತೆ 3 ಬಾರಿ ಪುನೀತ್ ರನ್ನು ಭೇಟಿ ಮಾಡಿದ್ದು ಇನ್ನೂ ನೆನಪಿನಲ್ಲಿದೆ. ಜೊತೆಗೆ ದೆಹಲಿಯ ಐಎಎಸ್ ಅಕಾಡೆಮಿ ಮುಖ್ಯಸ್ಥರೊಂದಿಗೆ ರಾಜ್ ಕುಮಾರ್ ಐಎಎಸ್ ಅಕಾಡೆಮಿ ವಿಷಯದಲ್ಲೂ ಒಮ್ಮೆ ಪುನೀತ್ ರನ್ನು ಭೇಟಿ ಮಾಡಿದ್ದೆ. ತುಂಬಾ ಡೌನ್ ಟು ಅರ್ಥ್ ; ನಾಯಕನೆಂಬ ಯಾವುದೇ ಹಮ್ಮುಬಿಮ್ಮು ಇರದೇ ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದ ಅಪ್ಪು ಇನ್ನಿಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ. ಮೃತ ಪುನೀತ್ ಆತ್ಮಕ್ಕೆ ಚಿರಶಾಂತಿ ಸಿಗಲಿ. *ಓಂ ಶಾಂತಿ:*
ಶಂಕರ್ ಎಸ್ ಎನ್
ನೀರಾವರಿ ನಿಗಮಗಳ ಸಾರ್ವಜನಿಕ ಸಂಪರ್ಕಾಧಿಕಾರಿ
