ಶಂಕಿತ ಡೆಂಗೀ ಜ್ವರದಿಂದ 14 ವರ್ಷದ ಬಾಲಕಿ ಸಾವು

ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಗ್ರಾಮದಲ್ಲಿ ಶಂಕಿತ ಡೆಂಗೀ ಜ್ವರದಿಂದ 14 ವರ್ಷದ ಬಾಲಕಿಯೊಬ್ಬಳು ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಿನಾಂಕ 20/9/2021 ರಂದು ಮೃತಪಟ್ಟಿರುತ್ತಾಳೆ.
ಬಾಲಕಿಗೆ 11/9/2021 ರಂದು ಶೀತ, ಜ್ವರ ಕಾಣಿಸಿಕೊಂಡಿದ್ದು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾಳೆ.
ಕೋವಿಡ್ ಪರೀಕ್ಷೆ ಮಾಡಿದ್ದು ನೆಗೆಟಿವ್ ಇರುತ್ತದೆ. ಜ್ವರ ಉಲ್ಬಣಗೊಂಡಿದ್ದರಿಂದ ಚನ್ನಗಿರಿ ಖಾಸಗಿ ಕ್ಲಿನಿಕ್ ಮತ್ತು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾಳೆ. ಡೆಂಗೀ ಗಾಗಿ ಪರೀಕ್ಷೆ ಮಾಡಲಾಗಿದ್ದು ಎನ್. ಎಸ್ -1 ಆಂಟಿಜನ್ ಪರೀಕ್ಷೆ ಪಾಸಿಟಿವ್ ಇರುತ್ತದೆ. ಆದರೆ ಮಾರ್ಗಸೂಚಿಗಳ ಪ್ರಕಾರ ಈ ಪರೀಕ್ಷೆಯು ನಿರ್ಣಾಯಕ ಅಲ್ಲದೆ ಇರುವುದರಿಂದ ಈ ಪ್ರಕರಣವನ್ನು ‘ಶಂಕಿತ ಡೆಂಗೀ ಮರಣ’ ಎಂದು ಪರಿಗಣಿಸಿದ್ದು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.