ಜ್ಞಾನದೀಪ ಶಾಲೆಯಲ್ಲಿ ಶಾರದಾಪೂಜೆ
ದಾವಣಗೆರೆ : ನಗರದ ಜ್ಞಾನ ದೀಪ ಪಬ್ಲಿಕ್ ಶಾಲೆಯಲ್ಲಿ ಶ್ರೀ ಶಾರದ ಪೂಜೆಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಕಾರ್ಯದರ್ಶಿ ಡಾ. ಕೆ. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಿರೀಶ್ ಬಿ.ಎಸ್., ಪ್ರಭು ಕೆ., ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಇಓ ಕರಿಬಸಪ್ಪ ಎಂ.ಎನ್. ಹಾಗೂ ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಸಿಆರ್‌ಪಿ ಭರತ್ ಆರ್.ಎಂ. ಹಾಗೂ ಮಂಜುಳಾ ಬಸವರಾಜಪ್ಪ ಇದ್ದರು.
ಶಾಲೆಯ ಮುಖ್ಯಶಿಕ್ಷಕಿ ವಿಶಾಲಾಕ್ಷಿ ರಂಗನಾಥ್ ಹಾಗೂ ಶಾಲಾ ಅಡ್ಮಿನ್ ಸವಿತಾ ಬಿ. ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಪ್ರಾರ್ಥನೆ ನೆರವೇರಿಸಲಾಯಿತು. ಮಮತ ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರಿಬಸಪ್ಪ ಅವರು ಶಾಲಾಭಿವೃದ್ಧಿ ಹಾಗೂ ಕಾರ್ಯದರ್ಶಿಯವರು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಮಕ್ಕಳ ಮತ್ತು ಶಿಕ್ಷಕರ ಬಗ್ಗೆ ತೋರಿಸುತ್ತಿರುವ ಕಾಳಜಿ ಬಗ್ಗೆ ವಿವರಿಸಿದರು. ಈ ಕಾರ್ಯಕ್ರಮವನ್ನು ಸಹಶಿಕ್ಷಕಿ ಪೂಜಾ ನೆರವೇರಿಸಿದರು, ಕೊನೆಯದಾಗಿ ಕು. ಗಾಯತ್ರಿ ಸರ್ವರನ್ನೂ ವಂದಿಸಿದರು, ಸಹ ಶಿಕ್ಷಕಿ ರಶ್ಮಿ ಎ.ಎಂ., ಸವಿತಾ ಬಿ.ಕೆ., ಮಮತ ಎಸ್.ಜೆ., ಉಮಾ ಎಸ್., ದಿವ್ಯಾ ಆರ್.ಜೆ., ಪೂಜಾ, ಕು.ಗಾಯತ್ರಿ ಹಾಗೂ ಸಹಾಯಕ ನಿರ್ಮಲ ಹೆಚ್. ಸೇರಿದಂತೆ ಇತರರು ಭಾಗವಹಿಸಿದ್ದರು.