ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡಲು ದಾವಣಗೆರೆ ಬಿಜೆಪಿಯಲ್ಲಿ ಗಂಡಸರಿಲ್ಲವೇ ಸಚಿವ ಭೈರತಿ ಬಸವರಾಜುಗೆ ಶಿವಗಂಗಾ ಬಸವರಾಜು ತಿರುಗೇಟು

ಚನ್ನಗಿರಿ : ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡಲು ದಾವಣಗೆರೆಯ ಬಿಜೆಪಿಯಲ್ಲಿ ಸ್ಥಳೀಯ ಗಂಡಸರು ಯಾರು ಇಲ್ಲವೇ ? ಚಿತ್ರದುರ್ಗ ಜಿಲ್ಲೆ ಭೀಮಸಮುದ್ರದ ಜಿ.ಎಂ ಸಿದ್ದೇಶ್ವರ ಅವರೇ ಬೇಕಾ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಟಾಂಗ್ ನೀಡಿದ್ದಾರೆ.
ಚಿತ್ರದುರ್ಗ – ದಾವಣಗೆರೆ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ನಿಂದ ಸೋಮಶೇಖರ್ ಬಿ ಸ್ಪರ್ಧೆ ವಿಚಾರ ಸಂಬಂಧ ಸ್ಥಳೀಯ ಕಾಂಗ್ರೆಸ್ ಲ್ಲಿ ಯಾರು ಇಲ್ಲವೇ ಎಂದು ಸಚಿವ ಭೈರತಿ ಬಸವರಾಜು ನೀಡಿದ್ದ ಹೇಳಿಕೆಗೆ ಬಸವರಾಜು ವಿ ಶಿವಗಂಗಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 1996 ಹಾಗೂ 1998 ರಲ್ಲಿ ಎರಡು ಬಾರಿ ಜಿ.ಮಲ್ಲಿಕಾರ್ಜುನಪ್ಪನವರು ಸ್ಪರ್ಧೆ ಮಾಡಿದ್ದಾರೆ ಆಗಿನ್ನೂ ಚಿತ್ರದುರ್ಗ ಜಿಲ್ಲೆಗೆ ದಾವಣಗೆರೆ ಒಳಪಟ್ಟಿತ್ತು. ಆದರೂ ದಾವಣಗೆರೆಯಿಂದ ಬಿಜೆಪಿ ಸ್ಥಳೀಯ ಮುಖಂಡರಿಗೆ ಯಾಕೆ ಅವಕಾಶ ನೀಡಿರಲಿಲ್ಲ. ನಂತರ 2004, 2009, 2014, 2019 ನಾಲ್ಕು ಚುನಾವಣೆಯಲ್ಲೂ ಚಿತ್ರದುರ್ಗ ಮೂಲದ ಜಿಎಂ ಸಿದ್ದೇಶ್ವರ ಅವರಿಗೆ ಬಿಜೆಪಿ ಮಣೆ ಹಾಕುತ್ತಿದೆ ಹಾಗಾದರೆ ದಾವಣಗೆರೆ ಬಿಜೆಪಿಯಲ್ಲಿ ಯಾರು ಗಂಡಸರು ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಸಚಿವರಾದ ಭೈರತಿ ಬಸವರಾಜು ಅವರು ಯಾವ ಕ್ಷೇತ್ರ ದಿಂದ ಗೆದ್ದು ಬಂದು ಉಸ್ತುವಾರಿಯಾಗಿದ್ದಾರೆ ? ದಾವಣಗೆರೆ ಜಿಲ್ಲೆಗೆ ಏಕೆ ಉಸ್ತುವಾರಿಯಾಗಿದ್ದೀರಾ ನಮ್ಮ ಜಿಲ್ಲೆಯಲ್ಲಿ ಸಚಿವರಾಗುವಂತ ಬಿಜೆಪಿ ಶಾಸಕರಲ್ಲಿ ಯಾರು ಗಂಡಸರು ಇಲ್ಲವೇ ಎಂದು ಬಸವರಾಜು ವಿ ಶಿವಗಂಗಾ ಟಾಂಗ್ ಕೊಟ್ಟಿದ್ದಾರೆ. ರಾಜ್ಯ ಸಭೆಗೆ ಬಿಜೆಪಿಯಿಂದ ನಮ್ಮ ರಾಜ್ಯದಿಂದ ಆಯ್ಕೆ ಮಾಡಿ ಕಳುಯಿಸಲಾಗಿದೆ ನಮ್ಮ ರಾಜ್ಯದ ಬಿಜೆಪಿಯಲ್ಲಿ ಗಂಡಸರು ಇಲ್ಲವೇ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡುತ್ತದೆ ಅದರಂತೆ ಅವಳಿ ಜಿಲ್ಲೆಯಿಂದ ಸೋಮಶೇಖರ್ ಅವರು ಸ್ಪರ್ಧೆ ಮಾಡಿದ್ದಾರೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಮತ್ತು ಮುಖಂಡರ ಒಮ್ಮತ ನಿರ್ಧಾರ ಹಾಗೂ ಪಕ್ಷದ ತೀರ್ಮಾನದಂತೆ ಸೋಮಶೇಖರ್ ಅವರನ್ನ ಕಣಕ್ಕಿಳಿಸಲಾಗಿದೆ. ಈ ಬಾರಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಬಸವರಾಜು ವಿ ಶಿವಗಂಗಾ ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ.